ಚಳ್ಳಕೆರೆ : ಕೃಷಿ ಜಂಟಿ ನಿರ್ದೇಶಕ ಅಮಾನತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಪಡಿಸಿ ತಾಶಿಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಮೊಳಕಾಲ್ಮೂರು ತಾಲೂಕು ಕಚೇರಿ ಮುಂಭಾಗ ಪ್ರತಿಪಟಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿ ಬೇಡರೆಡ್ಡಿಹಳ್ಳಿಬಸವರೆಡ್ಡಿ ಹಾಗೂ ರೈತ ಸಂಘ, ರೈತರ ನೋವಿಗೆ, ಸಂಕಷ್ಟಕ್ಕೆ ಧಾವಿಸದೆ ಇರುವಂತಹ ಕೃಷಿ ಜಂಟಿ ನಿರ್ದೇಶಕ ರೈತರಿಗೆ ಅಪಮಾನ ಮಾಡಿ ನಿಂದಿಸಿದ್ದಾರೆ, ಇಂಥ ಅಧಿಕಾರಿಗಳನ್ನು ಸರ್ಕಾರ ಈ ಕೂಡಲೇ ಅಮಾನತು ಮಾಡಿ ಆದೇಶ ಹೊರಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೂನ್ ಜುಲೈ ರೈತರಿಗೆ ಬಿತ್ತನೆ ಸಮಯ ಇಂತಹ ಸಮಯದಲ್ಲಿ ರೈತರಿಗೆ ಉತ್ತಮವಾದ ಬೀಜ ಗೊಬ್ಬರ ಕಾಳುಗಳನ್ನು ವಿತರಿಸುವುದು ಕೃಷಿ ಇಲಾಖೆಯ ಆದ್ಯ ಕರ್ತವ್ಯ ಆದರೆ ರೈತರಿಗೆ ಗುಣಮಟ್ಟವಲ್ಲದ ಗೊಬ್ಬರವನ್ನು ವಿತರಿಸಿದಂತಹ ಕಂಪನಿಯ ವಿರುದ್ಧ ಚಕಾರ ಎತ್ತದೆ ರೈತರಿಗೆ ಅನುಕೂಲ ಮಾಡಿ ಕೊಡದೆ, ರೈತರ ಅಳಲನ್ನು ಕೇಳದೆ, ಕೃಷಿ ಜಂಟಿ ನಿರ್ದೇಶಕರು ರೈತರಿಗೆ ನಿಂದಿಸಿ ಅಪಮಾನ ಮಾಡಿದ್ದಾರೆ ಇದರಿಂದ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

