ಚಳ್ಳಕೆರೆ :
ಹೊಳಲ್ಕೆರೆ: ವಿಮೆ ಹಣ ಬಿಡುಗಡೆಗೆ ರೈತರ ಪ್ರತಿಭಟನೆ
ಹೊಳಲ್ಕೆರೆ ತಾಲೂಕಿನ ಎನ್.ಜಿ.ಹಳ್ಳಿಯ ಪ್ರಗತಿ ಗ್ರಾಮೀಣ
ಬ್ಯಾಂಕ್ ಬಳಿ, ಕಳೆದ ಸಾಲಿನ ಬೆಳೆ ವಿಮೆ ಹಣವನ್ನು ಬಿಡುಗಡೆ
ಮಾಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.
ರೈತರು ಸಕಾಲಕ್ಕೆ ವಿಮೆ ಕಂತುಗಳನ್ನು ಪಾವತಿಸಿದ್ದರೂ, ವಿಮಾ
ಕಂಪನಿಗಳು ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ತೀವ್ರ
ಅನ್ಯಾಯವಾಗುತ್ತಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು
ರೈತರು ಆಗ್ರಹಿಸಿದರು.

