ಚಳ್ಳಕೆರೆ :
ಆಲ್ ಇಂಡಿಯಾ ಬಹುಜನ ಸಮಾಜ
ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಪ್ರವಾಸಿಮಂದಿರದಲ್ಲಿ ರಾಮಾಬಾಯಿ ಅಂಬೇಡ್ಕರ್ ರವರ 128ನೇ ಜಯಂತಿ ಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಮಾತನಾಡಿ, ಒಂದು ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿನ ಪರಿಶ್ರಮ ಇದ್ದೆ ಇರುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಮಾತೆ ರಾಮಬಾಯಿ ಅಂಬೇಡ್ಕರ್ ರವರು. ಈ ಮಹಾಮಾತೆಯ ತ್ಯಾಗದ ಫಲವೇ ಈವತ್ತಿನ ಕೋಟ್ಯಂತರ ಜನರ ಬದುಕನ್ನು ಹಸನು ಮಾಡಲು ದಾರಿ ಮಾಡಿಕೊಟ್ಟಿದೆ. ಈ ದಿನ ಆ ಕರುಣಾಮಯಿ, ತ್ಯಾಗಮಯಿ, ಮಹಾಮಾತೆಯ ಹುಟ್ಟುಹಬ್ಬ. ನಾವು ಸಾಯುವವರೆಗೂ ಬಾಬಾ ಸಾಹೇಬರನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ, ಅದೇ ರೀತಿ ಅವರ ಪತ್ನಿ ಮಾತೆ ರಮಾ ಬಾಯಿ ಯವರನ್ನು ಕೂಡ ಮರೆಯಬಾರದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿಗಳು ಭೀಮನಕೆರೆ ಶಿವಮೂರ್ತಿ. ಮಹಿಳಾ ರಾಜ್ಯ ಕಾರ್ಯದರ್ಶಿ ಗಳು . ಲಕ್ಷ್ಮಮ್ಮ, ಜಿಲ್ಲಾಧ್ಯಕ್ಷರು ಎನ್. ಪ್ರಕಾಶ್. ಹಿರಿಯೂರು ಅಸೆಂಬ್ಲಿ ಅಧ್ಯಕ್ಷರು ಎಂ. ಜಗದೀಶ್. ಎನ್. ರಂಗಸ್ವಾಮಿ. ಮಂಜು ತಾಳಿಕೆರೆ, ಮೊಳಕಾಲ್ಮುರು ಪ್ರಸನ್ನ, ಮಾಜಿ ಜಿಲ್ಲಾಧ್ಯಕ್ಷರು ದಿ ||.ವೆಂಕಟೇಶ್ ಐಹೊಳೆ ಯವರ ಧರ್ಮಪತ್ನಿ . ಶಿಲ್ಪಾ, ಹಿರಿಯೂರು ಅಸೆಂಬ್ಲಿ ಉಪಾಧ್ಯಕ್ಷರು ರಾಜಣ್ಣ. ಹಾಗು ಇನ್ನಿತರರು ಭಾಗವಹಿಸಿದ್ದರು.

