ಚಳ್ಳಕೆರೆ : ವಕೀಲರು ತಮ್ಮ ವೃತ್ತಿ ಜೀವನದಲ್ಲಿ ದಿನನಿತ್ಯದ ಒತ್ತಡ ಬದುಕಿನ ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಸಂವಿಧಾನದ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿರುವುದು ಸಂತಸ ತಂದಿದೆ ಎಂದು ಜೆ.ಎಂ.ಎಪ್.ಸಿ ,ಹಿರಿಯ ಸಿವಿಲ್ ನ್ಯಾಯದೀಶರಾದ ಶಮೀರ್ ಪಿ.ನಂದ್ಯಾಲ್ ಹೇಳಿದ್ದಾರೆ.
ಅವರು ಚಳ್ಳಕೆರೆ ನಗರದ ಸೊಮಗುದ್ದು ರಸ್ತೆಯ ಸಿವಿಲ್ ನ್ಯಾಯಾಲಯ ಆವರಣದಲ್ಲಿ ಭಾರತೀಯ ವೈದ್ಯಕೀಯ ಸಂಘ
ಚಳ್ಳಕೆರೆ ಶಾಖೆ ಇವರಿಂದ
ಸಂವಿಧಾನ ದಿನಾಚರಣೆ
ಅಂಗವಾಗಿ ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿಗಾಗಿ
ಉಚಿತ ಆರೋಗ್ಯ
ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು,
ವಕಾಲತ್ತು ಮಾಡುವ ವಕೀಲರ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾಗಿ ಎಲ್ಲಾ ವಕೀಲರಿಗೂ ಹಾಗೂ ನ್ಯಾಯಾಲಯದ ಸಿಬ್ಬಂದಿಗೂ ಸಂವಿಧಾನದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಮಾಡುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಇನ್ನೂ ಜೆ.ಎಂ.ಎಪ್.ಸಿ ,ಪ್ರಧಾನ ಸಿವಿಲ್ ನ್ಯಾಯದೀಶರಾದ ಹೆಚ್.ಆರ್.ಹೇಮಾ ಹಾಗೂ
ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಂ.ನಾಗರಾಜ್ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಭಾರತೀಯ ಆರೋಗ್ಯ ಮಕ್ಕಳ ತಜ್ಞರಾದ ಡಾ.ಟಿ.ಎಂ.ನಟರಾಜ್, ರೇಡಿಯಾಲಿಜಿಸ್ಟ್ ಡಾ.ಅರುಣ್ ಕುಮಾರ್ ಕೂನಾ, ವಕೀಲ ಸಂಘದ ಕಾರ್ಯದರ್ಶಿ ಎಂ.ಸಿದ್ದರಾಜು, ಟಿ.ರುದ್ರಯ್ಯ, ಬಿ.ಪಾಲಯ್ಯ, ಡಾ.ಅಮಿತ್ ಗುಪ್ತ, ಡಾ.ನಾಗರಾಜ್, ಡಾ.ನೂತನ್ ಬಾಬು, ಡಾ.ಪುನೀತ್ ಸಿರಿಗೆ, ಡಾ.ಪೂಜಾ ಆರ್., ಡಾ.ಅಮಿತ್ , ಇತರ ಸಿಬ್ಬಂದಿ ವರ್ಗ, ವಕೀಲರು ಇತರರು ಪಾಲ್ಗೊಂಡಿದ್ದರು.

