ಚಳ್ಳಕೆರೆ : ಸಾರ್ವಜನಿಕರು ತಮಗೆ ಅರಿವಿಲ್ಲದಂತೆ ರಸ್ತೆ ಪಕ್ಕದ ಖಾಲಿ ನಿವೇಶನಗಳಿಗೆ ಕಸವನ್ನು ತಂದು ಸುರಿಯುವುದರಿಂದ ಪೌರಕಾರ್ಮಿಕರಿಗೆ ಹೆಚ್ಚಿನ ಕೆಲಸದ ಒತ್ತಡ ಆಗುತ್ತದೆ,

ಇಂತಹ ಅವ್ಯವಸ್ಥೆಯನ್ನು ತಪ್ಪಿಸಲು ಚಳ್ಳಕೆರೆ ನಗರಸಭೆ ಸಿಬ್ಬಂದಿ ಸಿ ಸಿ ಕ್ಯಾಮೆರಾ ಅಳವಡಿಸುವ ಮೂಲಕ ಹದ್ದಿನ ಕಣ್ಣು ಇಟ್ಟಿದ್ದಾರೆ‌

ಖಾಲಿ ನಿವೇಶನಗಳಿಗೆ ಸಿ ಸಿ ಕ್ಯಾಮೆರಾ ಅಳವಡಿಸುವ ಮೂಲಕ ಕಸ ಸುರಿಯುವರಿಗೆ ಮೇಲೆ ನಿಗಾ ವಹಿಸಿದ್ದಾರೆ.

ಖಾಲಿ ನಿವೇಶನಗಳಿಗೆ ಯಾರೇ ಕಸ ತಂದು ಸುರಿದರು ಅವರ ವಿರುದ್ಧ ನಿರದಾಕ್ಷಿಣವಾಗಿ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಆಹಾರ ನಿರೀಕ್ಷಕರಾದ ಗೀತ ರವರು ನಮ್ಮ ಚಳಕೆರೆ ಟಿವಿ ಯೊಂದಿಗೆ ಮಾತನಾಡಿದರು.

ಅದರಂತೆ ನಗರದ ಸೋಮಗುದ್ದು ರಸ್ತೆಯ
ಭದ್ರಾ ಮೇಲ್ದಂಡೆ ಕಛೇರಿ ಪಕ್ಕದ ಕಂದಾಯ ಬಡಾವಣೆ, ಕೈಗಾರಿಕೆ ಇಲಾಖೆ ಹತ್ತಿರ, SR ರಸ್ತೆ ಸಂಗೊಳ್ಳಿ ರಾಯಣ್ಣ ಸರ್ಕಲ್, ಬುಡ್ಡನಟ್ಟಿ ಅಂಗಡಿ ಸಂಧಿ C.C ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ಕಸ ಹಾಕುವವರಿಗೆ ದಂಡ ವಿಧಿಸುವ ನಗರಸಭೆ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ…

About The Author

Namma Challakere Local News
error: Content is protected !!