ಕ್ಲಸ್ಟರ್ ಮಟ್ಟದ ಎಪ್ ಎಲ್ ಏನ್ ಕಲಿಕಾ ಹಬ್ಬ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಘಟಪರ್ತಿ.

ಚಳ್ಳಕೆರೆ : ‌ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಲಿಕಾ ಹಬ್ಬ ಪ್ರಮುಖ ಪಾತ್ರವಹಿಸುತ್ತದೆ, ಇಂತಹ ಮಕ್ಕಳ ಕಲಿಕಾ ಹಬ್ಬಗಳು ನಡೆಸುವುದು ಸಂತಸದಾಯಕವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಅಭಿಪ್ರಾಯ ಪಟ್ಟರು.

ಅವರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಘಟಪರ್ತಿಯಲ್ಲಿ ಆಯೋಜಿಸಲಾದ ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಪೂರ್ಣ ಕುಂಭ ಮೇಳದೊಂದಿಗೆ ಗ್ರಾಮದ ಶ್ರೀ ಕರಿಯಮ್ಮ ದೇವಿ ದೇವಸ್ಥಾನದಿಂದ ಶಾಲೆಯವರೆಗೆ ಸಂಭ್ರಮದಿಂದ ಬರಲಾಯಿತು, ಮಕ್ಕಳಿಗೆ ‌ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು,
ಮಕ್ಕಳು ಶಾಲಾ ಕಲಿಕೆಯಲ್ಲಿ ಸಡಗರ ಸಂಭ್ರಮದಿಂದ ಭಾಗವಹಿಸಬೇಕು ಆ ಮೂಲಕ‌ ಶಿಕ್ಷಣದ ಭದ್ರ ಬುನಾದಿಗೆ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಗಳನ್ನು ಅರ್ಥಪೂರ್ಣವಾಗಿ ಕಲಿಯಬೇಕು ಜೊತೆಗೆ ಪೋಷಕರೊಂದಿಗೆ ಉತ್ತಮ ಸಹ ಸಂಬಂಧವನ್ನು ಹೊಂದಬೇಕು ಆ ಮೂಲಕ ಪೋಷಕರಿಗೆ ಶಾಲೆಗೆ ಹೆಸರು ತರುವಂತಾಗಬೇಕು…
ಈ ಕಲಿಕೆಯು ಮುಂದಿನ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ತಯಾರಿಯಾಗಬೇಕು ಎಂದು ಆಶಿಸಿದರು….

ಇನ್ನೂ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್ ಪಿ,.ಕೆ.ಸಿ.ಶಿವಣ್ಣ, ಎಫ್ ಎಲ್ ಏನ್ ಕಲಿಕಾ ಹಬ್ಬ ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಹಾಗೂ ಸಂಖ್ಯ ಜ್ಞಾನವನ್ನು ಒಳಗೊಂಡಂತಹ ಚಟುವಟಿಕೆಯಾಗಿದ್ದು, 7 ಕಾರ್ನರ್ ಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ ಇವುಗಳಲ್ಲಿ ಎಲ್ಲ ವಿಧದ ಚಟುವಟಿಕೆಗಳು ಒಳಗೊಂಡಿರುತ್ತವೆ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ, ರಸಪ್ರಶ್ನೆ, ಮೆಮೊರಿ ಟೆಸ್ಟ್, ಪೋಷಕ ಮತ್ತು ಮಕ್ಕಳ ಸಹ ಸಂಬಂಧ ಈಗೇ ವಿಭಿನ್ನವಾದ ಚಟುವಟಿಕೆಗಳಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಆದ್ದರಿಂದ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತವೆ ಎಂದರು.

ಈದೇ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಸಿಆರ್‌ಪಿ ಶಿವಣ್ಣ, ಸುರೇಶ್ ಆರ್. ಶಿಕ್ಷಕರಾದ ಬಸವರಾಜ ಜೆ ಎಂ, ಹನುಮಂತ್ ರೆಡ್ಡಿ, ಎಂ.ಈಶ್ವರಪ್ಪ, ಎಸ್ ಬಿ ಮಂಜ ನಾಯಕ, ಪ್ರಹ್ಲಾದ ಬಿ, ಈ ಸಿಇಓ ಮಾರುತಿ ಭಂಡಾರಿ, ಪ್ರಭಾರ ಬಿ ಆರ್ ಸಿ ತಿಪ್ಪೇಸ್ವಾಮಿ, ಹಾಗೂ ಪೋಷಕರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು..

About The Author

Namma Challakere Local News
error: Content is protected !!