ಗುಂತಕೋಲ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ.ಪಿ. ಬಂಗಾರಪ್ಪ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ನಾಯಕನಹಟ್ಟಿ:: ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಗುಂತಕೋಲ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ.ಪಿ. ಬಂಗಾರಪ್ಪ ಅವರ ವಯೋನಿವೃತ್ತಿ ಬಿಳ್ಕೊಡುಗೆ ನಡೆಸಲಾಯಿತು
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ. ಜಯಣ್ಣ , ಸದಸ್ಯರಾದ ಪಾಟೀಲ್ ಬಿ ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಪ್ಪ, ಮಂಜಮ್ಮ ದುರುಗೇಶ್, ಗುಂತಕೋಲ್ಮನಹಳ್ಳಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ವಿಶ್ವನಾಥ, ಸಿಆರ್ಪಿ ಪಾಲಯ್ಯ, ಕೊರಡಿಹಳ್ಳಿ ಹೊಸೂರು ಬಡಾವಣೆ ಶಾಲಾ ಶಿಕ್ಷಕ ಎನ್. ಮಹಾಂತೇಶ್, ನಿವೃತ್ತ ಪ್ರಭಾರಿ ಮುಖ್ಯ ಶಿಕ್ಷಕ ಜಿ.ಪಿ. ಬಂಗಾರಪ್ಪ ಶಿಕ್ಷಕ ಶಿವರಾಜ್, ಶಿಕ್ಷಕಿರಾದ ಸಯಿದಾಮಹತಾಜ್, ಉಷಾ, ಅತಿಥಿ ಶಿಕ್ಷಕ ಟಿ. ಮಂಜುನಾಥ್ ಗುಂತಕೋಲ್ಮನಹಳ್ಳಿ, ಅಂಗನವಾಡಿ ಶಿಕ್ಷಕಿರಾದ ಪಾಲಮ್ಮ, ಶ್ರೀದೇವಿ, ಸಮುದಾಯ ಆರೋಗ್ಯ ಅಧಿಕಾರಿ ಸುಮಾಯ ಅಂಜು ಸೇರಿದಂತೆ ಶಾಲೆಯ ಅಡಿಗೆ ಸಿಬ್ಬಂದಿಗಳು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

