ಚಳ್ಳಕೆರೆ :
ಹಿರಿಯೂರು: ಖಂಡೇನಹಳ್ಳಿಯಲ್ಲಿ ಶನೇಶ್ವರ ಸ್ವಾಮಿ
ರಥೋತ್ಸವ
ಹಿರಿಯೂರಿನ ಧರ್ಮಪುರದ ಖಂಡೇನಹಳ್ಳಿ ಶನೇಶ್ವರ ಸ್ವಾಮಿ,
ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು
ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ದೇವರಿಗೆ ಅಭಿಷೇಕ
ಕಲ್ಯಾಣೋತ್ಸವದ, ನಂತರ ತೇರಿನ ಮುಂಭಾಗದಲ್ಲಿ ಧಾರ್ಮಿಕ
ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ರಥವನ್ನು ಹೂವು
ಬಾಳೆದಿಂಡು ಮತ್ತು ಬಾವುಟಗಳಿಂದ ಅಲಂಕರಿಸಲಾಗಿತ್ತು. ದೇವರ
ಮೂರ್ತಿಯನ್ನು ದೇವಸ್ಥಾನದಿಂದ ರಥದ ಬಳಿ ಕರೆ ತಂದು ಪೂಜೆ
ಮಾಡಿ ರಥದಲ್ಲಿ ಕೂರಿಸಲಾಯಿತು. ನಂತರ ರಥೋತ್ಸವಕ್ಕೆ ಚಾಲನೆ
ನೀಡಲಾಯಿತು.

