ಚಳ್ಳಕೆರೆ :
ಹೊಳಲ್ಕೆರೆ: ಕೊಲೆ ರಹಸ್ಯ ಬಿಚ್ಚಿಟ್ಟ ಎಸ್ಪಿ ರಂಜಿತ್
ಕುಮಾರ್ ಬಂಡಾರು
ಹೊಳಲ್ಕೆರೆ ಚಿಕ್ಕಜಾಜೂರು ಬಳಿ ಕೊಲೆಯಾಗಿದ್ದ ಮಣಿಕಂಠ ಇಬ್ಬರು
ಸ್ನೇಹಿತರೊಂದಿಗೆ ಹಿರೇಗುಂಟನೂರು ಜಾತ್ರೆಗೆ ಸ್ನೇಹಿತ ಆಟೋದಲ್ಲಿ
ಬಂದಿದ್ದು, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಜೊತೆ ಮಣಿಕಂಠ
ಆಟೋದಲ್ಲಿ ಅಸಭ್ಯವಾಗಿ ವರ್ತಿಸಿದ್ದೇ ಕೊಲೆಗೆ ಕಾರಣವಾಗಿತ್ತೆಂದು
ಎಸ್ಪಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಜಾತ್ರೆಯಲ್ಲಿ
ಜಗಳ ಶುರು ಮಾಡಿದ ಸ್ನೇಹಿತರು ಸಾಸಲು ಹಳ್ಳದಲ್ಲಿ ಮಣಿಕಂಠನ
ಹೊಡೆದು ಕೊಲೆ ಮಾಡಿದ್ದಾರೆಂದು ತಿಳಿಸಿದರು.

