ಗುಂತಕೋಲಮ್ಮನಹಳ್ಳಿ ಅಂಗನವಾಡಿ”ಎ” ಮತ್ತು “ಬಿ” ಕೇಂದ್ರದಲ್ಲಿ ಅಬ್ಬೇನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಅನಿತಮ್ಮ ಜಿ.ಎಂ ಜಯಣ್ಣ ಕಿಟ್ ವಿತರಣೆ.

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಗರ್ಭಿಣಿಯರಿಗೆ ಗೇಲ್ ಕಂಪನಿ ಕಿಟ್ಟು ಸಹಕಾರಿಯಾಗಲಿದೆ ಎಂದು ಅಬ್ಬೇನಹಳ್ಳಿ ಗ್ರಾ. ಪಂ. ಉಪಾಧ್ಯಕ್ಷ ಶ್ರೀಮತಿ ಅನಿತಮ್ಮ ಜಿ.ಎಂ. ಜಯಣ್ಣ ಹೇಳಿದ್ದರು.

ಶುಕ್ರವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದ ಅಂಗನವಾಡಿ “ಎ” ಬಿ.” ಕೇಂದ್ರಗಳಲ್ಲಿ ನೊಂದಾಯಿತ ಒಂದನೇ ಗರ್ಭಿಣಿಯರಿಗೆ ಗೇಲ್ ಕಂಪನಿಯ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಗರ್ಭಿಣಿಯರಿಗೆ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಲು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಗೇಲ್ ಕಂಪನಿ ಕಿಟ್ಟುಗಳನ್ನ ನೀಡಿದೆ. ನೊಂದಾಯಿತ ಗರ್ಭಿಣಿಯರು ಕಿಟ್ಟುಗಳನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದರು.

ಈ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಪಟೇಲ್ ಜಿ. ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಪ್ಪ, ಮಂಜುಳ ದುರುಗೇಶ್, ಹಾಗೂ ಗರ್ಭಿಣಿಯರಾದ ಶೈಲಾ, ನಾಗೇಂದ್ರಮ್ಮ, ಅಂಗನವಾಡಿ ಶಿಕ್ಷಕಿರಾದ ಪಾಲಮ್ಮ, ಶ್ರೀದೇವಿ, ಸಹಾಯಕಿರಾದ ಅನಿತಮ್ಮ, ಶಾರದಮ್ಮ, ಇದ್ದರು.

About The Author

Namma Challakere Local News
error: Content is protected !!