ಶಂಕರ ಕಣ್ಣಿನ ಆಸ್ಪತ್ರೆಯ ಶ್ಲಾಘನೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಟಿ ಮಂಜುಳ ಶ್ರೀಕಾಂತ್
ನಾಯಕನಹಟ್ಟಿ :
ಲಕ್ಷಂತರ ಜನರಿಗೆ ಕಣ್ಣಿನ ಚಿಕಿತ್ಸೆ ನೀಡಿ ವೃದ್ದರಿಗೆ ಅಂದರಿಗೆ ದಾರಿದೀಪವಾಗಿದೆ ಶಂಕರ ಕಣ್ಣಿನ ಆಸ್ಪತ್ರೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಟಿ ಮಂಜುಳ ಶ್ರೀಕಾಂತ್ ಹೇಳಿದ್ದಾರೆ.
ಶುಕ್ರವಾರ ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಕಂಚಿ ಕಾಮಕೋಟಿ ಮಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಮದರ್ ತೆರೇಸಾ ಗ್ರಾಮೀಣ ಸಂಸ್ಥೆ, ಕರವೇ ಕನ್ನಡ ಸೇನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿತ್ರದುರ್ಗ, ಜಿಲ್ಲಾ ಅಂಧತ್ವ ನಿಯಂತ್ರಣಾ ಕಚೇರಿ, ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿ ಚಳ್ಳಕೆರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತç ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ಗ್ರಾಮೀಣ ಬಡ ಜನರಿಗೆ ಶಂಕರ ಕಣ್ಣಿನ ಆಸ್ಪತ್ರೆ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ಇತಂತಹ ಶಿಬಿರಗಳನ್ನು ಆಯೋಜಿಸಿರುವುದು ಸಂತಸ ತಂದಿದೆ, ನಾಯಕನಹಟ್ಟಿ ಹೋಬಳಿ ಪಟ್ಟಣದ ಜನರು ಇತಂಹ ಉಚಿತ ಶಿಬಿರಗಳಲ್ಲಿ ಬಾಗವಹಿಸಿ ಸದುಪಯೋಗ ಪಡೆಕೊಳ್ಳುಬೇಕು ಎಂದರು.
ಇದೇ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಓ ಶ್ರೀನಿವಾಸ ಮಾತನಾಡಿ ವೃದ್ಧರಿಗೆ ಅಂಧರಿಗೆ ಸಾಮಾಜಿಕ ಕಳಕಳಿವುಳ್ಳ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಹಾಗೂ ಕರವೇ ಕನ್ನಡ ಸೇನೆ ಇತಂಹ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಿದ್ದಾರೆ, ಈ ಭಾಗದಲ್ಲಿ ಇತಂಹ ಶಿಬಿರಗಳು ಹೆಚ್ಚಿನದಾಗಿ ನಡೆಯಲ್ಲಿ ನಮ್ಮ ಪಟ್ಟಣ ಪಂಚಾಯಿತಿ ವತಿಯಿಂದ ಸಹಕಾರ ನೀಡಲಾಗುವುದು ಎಂದರು.
ಇದೇ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಪಿ. ತಿಪ್ಪೇಸ್ವಾಮಿ ಸದಸ್ಯ ಎಂ. ಟಿ. ಮಂಜುನಾಥ, ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ, ಮದರ್ ತೆರೇಸಾ ಸಂಸ್ಥೆ ಅಧ್ಯಕ್ಷ ನಾಗರಾಜ, ಶಂಕರ್ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ರವಿಕುಮಾರ್, ಸಚಿನ್, ಕರವೇ ತಾಲ್ಲೂಕು ಅಧ್ಯಕ್ಷ ಮುತ್ತಯ್ಯ, ಹೋಬಳಿ ಅಧ್ಯಕ್ಷ ಕೆ ಜಿ ಮಂಜುನಾಥ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ನಗರ ಉಪಾಧ್ಯಕ್ಷ ರಾಘವೇಂದ್ರ, ಗ್ರಾಮ ಘಟಕ ಅಧ್ಯಕ್ಷ ಶಿವಕುಮಾರ್, ಮದರ್ ತೆರೇಸಾ ಸಂಸ್ಥೆ ಸದಸ್ಯರಾದ ಉದಯಕಿರಣ್, ಪ್ರೇಮಾ, ಕಾವಲು ಬಸವೇಶ್ವರ ನಗರ ಬಡಿಗೆ ತಿಪ್ಪೇಸ್ವಾಮಿ ಇತರರು ಇದ್ದರು.

