ಚಳ್ಳಕೆರೆ :
ಹೊಳಲ್ಕೆರೆ: ಹಾಳಾದ ರಸ್ತೆಯಿಂದ ಗ್ರಾಮಸ್ಥರ ಪರದಾಟ
ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ರೈಲ್ವೆ ನಿಲ್ದಾಣದ ಬಳಿ
ಇರುವ ಹೊಸನಗರ ಬಡಾವಣೆಯ ಮುಖ್ಯ ರಸ್ತೆಯಿಂದ ಅಡ್ಡೆರಿ
ಚೌಡೇಶ್ವರಿ ದೇವಿ ದೇವಸ್ಥಾನಕ್ಕೆ ಹೋಗುವ ಮಣ್ಣಿನ ರಸ್ತೆ
ಸಂಪೂರ್ಣ ಹಾಳಾಗಿದೆ. ಈ ರಸ್ತೆಯು ದೇವಸ್ಥಾನ, ಮನೆಗಳು,
ಹೊಲ ಹಾಗೂ ತೋಟಗಳಿಗೆ ಸಂಪರ್ಕ ಕಲ್ಪಿಸಿದ್ದು, ರೈತರು
ಹಾಗೂ ಗ್ರಾಮಸ್ಥರು ಸಂಚರಿಸಲು ಪರದಾಡುವಂತಾಗಿದೆ. ರಸ್ತೆ
ಸುಧಾರಣೆಗಾಗಿ ಗ್ರಾಮಸ್ಥರು ಇಂದು ಒತ್ತಾಯಿಸಿದ್ದಾರೆ.

