ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಗ್ರಾಮಗಳಿಗೆ ಬಸ್ ಸೌಕರ್ಯ : ಶಾಸಕ ಟಿ.ರಘುಮೂರ್ತಿ ಚಾಲನೆ..!
ಸಾರ್ವಜನಿಕರಿಗೆ ಸ್ಪಂಧಿಸಿದ ಶಾಸಕರು..!
ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯಕ್ಕೆ ಹಸಿರು ನಿಶಾನೆ..!!
ಚಳ್ಳಕೆರೆ : ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮಹಾದಾಸೆ ಹೊಂದಿದ್ದೆವೆ, ಅದರಂತೆ ಕಳೆದ ಹತ್ತು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ನಿಲ್ದಾಣದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ಕಲ್ಪಿಸುವ ನಿಟ್ಟಿನಲ್ಲಿ ಎರಡು ಸಾರಿಗೆ ಬಸ್ ಗಳನ್ನು ತಾಲೂಕಿನ ನನ್ನಿವಾಳ ಭಾಗದ ಪೆತ್ತಮರಹಟ್ಟಿ, ಪೇಲವಾರಹಟ್ಟಿ, ವೀರದಿಮ್ಮನಹಳ್ಳಿ, ಮರಡಿಹಟ್ಟಿ ಕ್ರಾಸ್, ತೋಡ್ಲರಹಟ್ಟಿ, , ಬಂಗಾರದೇವರಹಟ್ಟಿ, ಗಡ್ಡದೇವರಹಟ್ಟಿ, ವರವಿನಹಟ್ಟಿ, ಕ್ರಸ್, ದೊರೆಹಟ್ಟಿ, ಚಂದ್ರಗಿರಿಹಟ್ಟಿ, ನಿಂಗೊಲರಹಟ್ಟಿ, ರತ್ನಗಿರಿ, ನಕ್ಲರಹಟ್ಟಿ, ಚಿಕ್ಕ ಕಾಟ್ಲಹಟ್ಟಿ, ಮಾಡುಲುಹಟ್ಟಿ, ಈಗೇ ಹಲವು
ಮಾರ್ಗಗಳಿಗೆ ಸಾರಿಗೆ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ
ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳು ಇತದೃಷ್ಠಿಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಸೌಲಭ್ಯ ಹೊದಗಿಸುವ ನಿಟ್ಟಿನಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ, ಎಂದರು.
ಈದೇ ಸಂಧರ್ಭದಲ್ಲಿ ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ಶ್ರೀನಿವಾಸ್,
ವ್ಯವಸ್ಥಾಪಕರಾದ ಪ್ರಭು, ಇತರ ಸಿಬ್ಬಂದಿಗಳು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, , ಕೆಡಿಪಿ ನಾಮ ನಿದೇರ್ಶನ ಸದಸ್ಯ ರಂಗಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಶಶಿಧರ್, ವೀರಭದ್ರಪ್ಪ, ರಮೇಶ್ ಗೌಡ, ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಗ್ರಾಮಸ್ಥರು, ಇತರರ ಸಿಬ್ಬಂದಿ ಶಾಲಾ ವಿದ್ಯಾರ್ಥಿಗಳು ಇದ್ದರು.


