ಶಾಸಕ ಎನ್.ವೈ.ಗೋಪಾಲಕೃಷ್ಣ ಮೊಳಕಾಲ್ಮೂರು ಕ್ಷೇತ್ರದ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ವ್ಯಕ್ತಿಯಲ್ಲ: ವಕೀಲ ಹಿರೇಹಳ್ಳಿ ಮಲ್ಲೇಶ್‌.

ನಾಯಕನಹಟ್ಟಿ: ಮೊಳಕಾಲೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ಮಾದಿಗ ಸಮುದಾಯಕ್ಕೆ ಮೋಸ ಮಾಡುವ, ಅನ್ಯಾಯ ಮಾಡುವ ಅಥವಾ ಕಡೆಗಣಿಸುವ ವ್ಯಕ್ತಿಯಲ್ಲ ಜಿಲ್ಲೆಯ ಅತ್ಯುತ್ತಮ ಶಾಸಕರು ಎಂದು ಕೆಪಿಸಿಸಿ ರಾಜ್ಯ ಸಂಚಾಲಕ ಎಸ್.ಸಿ.ವಿಭಾಗ ಹಿರೇಹಳ್ಳಿ ಮಲ್ಲೇಶ್‌ರವರು ಮಾತನಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದನ್ನು ನಾವುಗಳು ಗಮನಿಸಿದ್ದೇವೆ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮುದಾಯದ ಸಹೋದರರು ಕ್ಷೇತ್ರದ ಶಾಸಕರು ಮಾದಿಗ ಸಮುದಾಯಕ್ಕೆ ಸ್ಥಳೀಯವಾಗಿ ರಾಜಕೀಯ ಪ್ರಾತಿನಿಧ್ಯಯವನ್ನು ಇಲ್ಲದಾಗಿಸುವ ಉನ್ನಾರಕ್ಕೆ ಮುಂದಾಗಿದ್ದಾರೆ. ಮತ್ತು ಪಟ್ಟಣ ಪಂಚಾಯಿತಿಯ ನಾಮ ನಿರ್ದೇಶನ ಸದಸ್ಯರನ್ನು ಆಯ್ಕೆ ಮಾಡುವಲ್ಲಿ ಮಾದಿಗ ಸಮುದಾಯವನ್ನು ಕೈಬಿಟ್ಟಿದ್ದಾರೆ ಎಂಬ ಆರೋಪಗಳನ್ನು ಸಮುದಾಯದ ಮುಖಂಡರು ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಕೆರೆಯಾಗಳಹಳ್ಳಿ, ಭೀಮನಕೆರೆ, ಗಿಡ್ಡಾಪುರ, ನಲಗೇತನಹಟ್ಟಿ ಮನ್ನೆಕೋಟೆ, ಕೋಡಿಹಳ್ಳಿ, ತಳಕು, ದೇವರೆಡ್ಡಿಹಳ್ಳಿ, ಕುದಾಪುರ, ಹಿರೇಹಳ್ಳಿ,
ಬೇಡರೆಡ್ಡಿಹಳ್ಳಿ, ಬಂಜಿಗೆರೆ, ತುಮಕೂರಹಳ್ಳಿ, ಚಿಕ್ಕೋಬನಹಳ್ಳಿ ಭಟ್ರಹಳ್ಳಿ, ಚಿಕ್ಕರಹಳ್ಳಿ, ಮಲ್ಲಹಳ್ಳಿ, ಕರಡಿಹಳ್ಳಿ, ಹಾನಗಲ್, ನಾಗಸಮುದ್ರ, ರಾಂಪುರ, ಸಿದ್ದಯ್ಯನಕೋಟೆ, ಅಂಬೇಡ್ಕರ್ ಭವನಕ್ಕೆ ತಲಾ 1 ಗ್ರಾಮಕ್ಕೆ 20 ಲಕ್ಷ ರೂ.ಗಳಂತೆ 44 ಲಕ್ಷರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀಕಾಂತ್ ಮಾತನಾಡಿ, ಶಾಸಕ ಎನ್.ವೈ. ಗೋಪಾಲಕೃಷ್ಣರವರು ಮಾದಿಗ ಸಮುದಾಯದ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅದರಲ್ಲಿ ಮಾದಿಗ ಲಿಂಗಾಯಿತರು ಗೊಲ್ಲರು ಅಂತ ಜಾತಿ ಭೇದ ಮಾಡಲಿಲ್ಲ. ನಾವು ಅವರೊಂದಿಗೆ ಅನ್ಯೂನತೆಯಲ್ಲಿ ಇದ್ದೇವೆ. ಪ್ರತಿ ಚುನಾವಣೆಗಳು ಸಹ ಕೆಲಸ ಮಾಡಿದ್ದೇವೆ ನಮ್ಮ ಪಕ್ಷದವರು ಹೇಳಿಕೆ ಕೊಟ್ಟಿರೋದನ್ನು ಖಂಡಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಎಂ. ಟಿ. ಮಂಜುನಾಥ್, ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಎಸ್ ಸಿ ವಿಭಾಗ ಅಧ್ಯಕ್ಷ ಆರ್ ಬಸವರಾಜ್, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ವೆಂಕಟೇಶ್, ಇದ್ದರು.

About The Author

Namma Challakere Local News
error: Content is protected !!