ಚಳ್ಳಕೆರೆ :
ಚಳ್ಳಕೆರೆ: ಗ್ರಾಮೀಣಭಾಗದ ಕಾರ್ಮಿಕರಿಗಾಗಿ ಸಂಚಾರಿ
ಚಿಕಿತ್ಸಾಲಯ
ಕಾರ್ಮಿಕರು ಆರೋಗ್ಯವಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ.
ಇದರಿಂದ ಕಾರ್ಮಿಕರ ಆರೋಗ್ಯ ಕಾಪಾಡಲು ಸರ್ಕಾರ ಸಂಚಾರಿ
ಚಿಕಿತ್ಸಾಲಯ ಸೇವೆ ಆರಂಭಿಸಿದ್ದು, ಚಳ್ಳಕೆರೆಯಲ್ಲಿ ಸಂಚಾರಿ
ಚಿಕಿತ್ಸಾಲಯ ಕೆಲಸ ನಿರ್ವಹಿಸುತ್ತಿದೆ ಎಂದು ಚಳ್ಳಕೆರೆ ಶಾಸಕ
ರಘು ಮೂರ್ತಿ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ
ಮಾತಾಡಿದ ಶಾಸಕ ರಘುಮೂರ್ತಿ, ಗ್ರಾಮೀಣ ಭಾಗದ ಕಟ್ಟಡ
ಕಾರ್ಮಿಕರ ಗುರುತಿಸಿ ಚಿಕಿತ್ಸೆ ನೀಡುತ್ತಿದೆ. ಪ್ರತಿ ಜಿಲ್ಲೆಗೆ ಮೂರು
ಅಥವಾ ನಾಲ್ಕು ಸಂಚಾರಿ ಚಿಕಿತ್ಸಾಲಯ ಆರಂಭಿಸಿದೆ ಎಂದರು.

