ಚಳ್ಳಕೆರೆ :
ಚಿತ್ರದುರ್ಗ: ಮಾನವಹಕ್ಕು ಆಯೋಗದ ಅಧ್ಯಕ್ಷರಿಂದ
ಜಿಲ್ಲಾಸ್ಪತ್ರೆಗೆ ಭೇಟಿ
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ರ
ತಂಡ ಗುರುವಾರ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಹೊರ
ರೋಗಿಗಳ ವಿಭಾಗ ಸೇರಿದಂತೆ ವಾರ್ಡ್ ಪರಿಶೀಲಿಸಿ ರೋಗಿ
ಹಾಗೂ ಸಾರ್ವಜನಿಕರಿಂದ ಜಿಲ್ಲಾಸ್ಪತ್ರೆ ಕಾರ್ಯವೈಖರಿ ಬಗ್ಗೆ
ತಿಳಿದುಕೊಂಡಿತು.
ತಜ್ಞ ವೈದ್ಯರು ಕರ್ತವ್ಯದ ಬಗ್ಗೆ ಇಂಟನ್ರ್ಶಿಪ್ ನ
ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ, ಸ್ಟಾಫ್ ನರ್ಸ್
ಸಂಖ್ಯೆ, ಜಿಲ್ಲಾಸ್ಪತ್ರೆಯಲ್ಲಿನ ಶಸ್ತ್ರಚಿಕಿತ್ಸೆಗಳ ವಿವರ ಪಡೆದರು.
ಔಷಧಿ ವಿತರಣಾ ಮಳಿಗೆಗೆ ಭೇಟಿ ನೀಡಿದರು.

