ದುರ್ನಾಥ ಬೀರುತ್ತಿರುವ ಕಾಲೇಜು ಆವರಣದ ಗುಂಡಿ.

ಚಳ್ಳಕೆರೆ :

ಕಾಲೇಜ್ ಸಮೀಪ ದುರ್ನಾತ
ಈ ಗುಂಡಿ ಹತ್ರ ಹೋದ್ರೆ ಸ್ವಲ್ಪ ಹೊತ್ತು ಮುಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ..

ಕಸದ ತ್ಯಾಜ್ಯದಿಂದ ತುಂಬಿ ಹೋಗಿರುವ ಈ ಗುಂಡಿ, ಮಳೆ ನೀರು ಶೇಖರಣೆಯಾಗಿ ಈ ನೀರಿನ ಜತೆಗೆ ಹಾಸ್ಟೆಲ್ ನೀರು ಸೇರಿ ಮಲೀನ ಗೊಂಡಿದ್ದು ದುರ್ನಾಥ ಬೀರುತ್ತಿದೆ.
ಅಂದ ಹಾಗೆ ಈ ಗುಂಡಿ ಇರುವುದು ಎಲ್ಲಿ ಗೊತ್ತೆ ?

ಚಳ್ಳಕೆರೆ ನಗರದ ಎಚ್. ಪಿ. ಪಿ ಸಿ ಪ್ರಥಮ ದರ್ಜೆ ಕಾಲೇಜು ಹಾಗೂ ಕುರುಬರ ವಿದ್ಯಾರ್ಥಿ ನಿಲಯದ ಮಧ್ಯದಲ್ಲಿ .ಇಲ್ಲೆ ಪಕ್ಕದಲ್ಲಿ ಕಾಲೇಜು ಕೊಠಡಿಗಳಿದ್ದು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಈ ಗುಂಡಿಯಿಂದ ಬರುವ ದುರ್ನಾಥವನ್ನು ತಡೆಯಲು ಕಷ್ಟವಾಗುತ್ತಿದೆ. ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರಲಿದೆ..
ದುರ್ನಾಥ ಬೀರುತ್ತಿರುವ ಗುಂಡಿ ಮುಚ್ಚಿ ಇದರಿಂದ ಆಗುವಂತಹ ಅಪಾಯ ತಪ್ಪಿಸುವಂತೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ
ಪ್ರೊಫೆಸರ್ ಎಸ್ ಬಿ .ಮಂಜುನಾಥ್ ರವರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಸಭೆಗೆ ಪೌರಾಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದರೂ ಯಾವುದೇ ಗುಂಡಿ ಮುಚ್ಚುವಂತಹ ಕೆಲಸವಾಗಿಲ್ಲಾ ಎಂದು ಪ್ರಾಂಶುಪಾಲರು ಬೇಸರ ವ್ಯಕ್ತ ಪಡಿಸಿದ್ದಾರೆ.

ನಗರಸಭೆ ಇಂತಹ ಅನುಪಯುಕ್ತ ಗುಂಡಿಗಳನ್ನು ಮುಚ್ಚಿ ಆಗುವಂತಹ ಅಪಾಯಗಳನ್ನು ತಪ್ಪಿಸಬೇಕಿದೆ.

About The Author

Namma Challakere Local News
error: Content is protected !!