ಚಳ್ಳಕೆರೆ : ಬೇಸಿಗೆ ಆರಂಭಕಾಲದ ದಿನಗಳಲ್ಲಿ ಚಳ್ಳಕೆರೆ ನಗರಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನಾಯಕ ಸರಕಾರಿ ನೌಕರರು ಕಲ್ಪಿಸುವುದು ಸಂತಸ ವಿಷಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ತಾಲೂಕು ಕಚೇರಿ ಮುಂದೆ ನಿರ್ಮಿಸಿದ ಸರ್ಕಾರಿ ನೌಕರರ ಸಂಘದಿಂದ ನಿರ್ಮಿಸಿದ ಕುಡಿಯುವ ನೀರಿನ ಅರವಟ್ಟಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ಬೇಸಿಗೆಯ ಕಾಲ ಆರಂಭವಾಗಿದ್ದರಿಂದ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಮನುಷ್ಯನ ಆದ್ಯ ಧರ್ಮ ಆದ್ದರಿಂದ ಮಾನವನಾಗಿ ಇಂತಹ ಮಹಾತ್ ಪುಣ್ಯದ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜಮುಖಿ ಕೆಲಸವನ್ನು ಮಾಡುವುದು ಅನಿವಾರ್ಯವಾಗಿದೆ.

ಇಂತಹ ಮಹಾ ಕಾರ್ಯಕ್ಕೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಕೈಜೋಡಿಸಿರುವುದು ಸಂತಸ ಸಂತಸದ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ ಟಿ ವಿರೇಶ್, ಪದಾಧಿಕಾರಿಗಳು ನೌಕರ ಸಿಬ್ಬಂದಿ ವರ್ಗ ಹಾಗೂ ಹಲವು ಮುಖಂಡರುಗಳು ಸಾರ್ವಜನಿಕರು ಭಾಗವಹಿಸಿದ್ದರು

About The Author

Namma Challakere Local News
error: Content is protected !!