ಚಳ್ಳಕೆರೆ :

ಶಿಮುಲ್ ಒಕ್ಕೂಟದ ವತಿಯಿಂದ ಹಾಗೂ ಜಿಲ್ಲಾ ಶಿಮುಲ್ ನಿರ್ದೇಶಕರು ಗಳಿಂದ ವೈಯಕ್ತಿಕವಾಗಿ ಹಾಲು ಉತ್ಪಾದಕ ಸಹಕಾರ ಸಂಘಗಳ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಸಿಹಿ ವಿತರಣೆ ಕಾರ್ಯಕ್ರಮವನ್ನು

ಪಾವಗಡ ರಸ್ತೆಯಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ವಿತರಿಸಿ
ಮಾತನಾಡಿದ ಶಿಮುಲ್ ನಿರ್ದೇಶಕ ಬಿಸಿ.ಸಂಜಿವ್ ಮೂರ್ತಿ, ರೈತರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಇಂದಿನ ದಿನಮಾನಗಳಲ್ಲಿ ರೈತ ಮನೆಯಲ್ಲಿ ಒಂದು ಹಸು ಇದ್ದರೆ ಈಡೀ ಕುಟುಂಬ ಜೀವನ ನಡೆಸಬಹುದು, ಆದ್ದರಿಂದ ಹೈನುಗಾರಿಕೆ ರೈತನ ಹಾಸುಹೊಕ್ಕಾದ ವೃತ್ತಿಯಾಗಿದೆ ಎಂದರು.

ಇನ್ನೂ ಇದೇ ಸಂಧರ್ಭದಲ್ಲಿ ಶಿಮುಲ್ ಜಿಲ್ಲಾ ನಿರ್ದೇಶಕ ಜಿಪಿ.ರೇವಣ್ಣಸಿದ್ದಪ್ಪ, ಜಿಬಿ.ಶೇಖರಪ್ಪ, ಹಾಲು‌ ಒಕ್ಕೂಟದ

ಈ ಸಂದರ್ಭದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ
ನಿರ್ದೇಶಕರಾದ ರೇವಣಸಿದ್ದಪ್ಪ ಕೃಷ್ಣಪ್ಪ ಪುಟ್ಟರಾಜು
ನಾಗರಾಜ್
ಗುಣಶೇಖ‌ ಗೋವಿಂದರಾಜು
ಸಿಬ್ಬಂದಿಗಳಾದ ನಯಾಜ್ ರವಿಚಂದ್ರ ಡಾ. ನರೇಶ್‌
ಸುರೇಶ್‌ ವೆಂಕಟೇಶ್‌ ಸೇರಿದಂತೆ ಹಾಲು ಒಕ್ಕೂಟಗಳ
ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!