ಚಳ್ಳಕೆರೆ :
ಚಳ್ಳಕೆರೆ: ಮಳೆ ಮತ್ತು ಬಿರುಗಾಳಿಗೆ ಶೀಟ್ ಕುಸಿದು 50
ಸಾವಿರ ನಷ್ಟ
ಚಳ್ಳಕೆರೆಯ ಕಸ್ತೂರಿ ತಿಮ್ಮಪ್ಪನ ಹಳ್ಳಿಯಲ್ಲಿಂದು ಬಿರುಗಾಳಿ ಮತ್ತು
ಜೋರು ಮಳೆಯ ಪರಿಣಾಮ, ಮನೆ ಮುಂಭಾಗದಲ್ಲಿ ಹೊದಿಸಿದ್ದ
ಕಬ್ಬಿಣದ ಸರಳಿನ ಪೈಪ್, ಶೀಟ್ ಮೇಲೆ ಮತ್ತು ಚಾವಣಿ ಮೇಲೆ
ಬಾಗಶಃ ಕುಸಿದು ಬಿದ್ದ ಘಟನೆ ನಡೆದಿದೆ.
ದೇವರ ಮರಿಕುಂಟೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ್ತೂರಿ ತಿಮ್ಮಪ್ಪನಹಳ್ಳಿಯ ಕೃಷ್ಣ
ಬಡಾವಣೆಯ ಗೀತಾ ಎಂಬವರಿಗೆ ಸೇರಿದ ಮನೆ ಸೀಟ್ ಹಾಗೂ
ಮನೆಯ ಚಾವಣಿ ಹಾನಿಯಾಗಿದೆ 50 ಸಾವಿರ ನಷ್ಟ ಸಂಭವಿಸಿದೆ
ಎಂದು ಅಂದಾಜಿಸಲಾಗಿದೆ.

