ಚಳ್ಳಕೆರೆ : ಚಳ್ಳಕೆರೆ: ಕುಸಿದ ಈರುಳ್ಳಿ ಬೆಲೆ ಕಂಗಾಲಾದ ರೈತರು
ಚಳ್ಳಕೆರೆ ಕ್ಷೇತ್ರದ ಹಾಯ್ಕಲ್ ಗ್ರಾಮದ ರೈತರು ಈರುಳ್ಳಿ ಬೆಲೆ
ತೀವ್ರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ವಿಂಟಾಲ್ ಈರುಳ್ಳಿಗೆ
200-250 ರೂ. ದರ ಕೇಳುತ್ತಿದ್ದು, ಇದರಿಂದ ಬಿತ್ತನೆ ಮತ್ತು
ಕಟಾವು ಖರ್ಚು ಕೂಡ ಬರುತ್ತಿಲ್ಲ ಎಂದು ರೈತ ನಾಗರಾಜ್ ಬೇಸರ
ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ರೈತರ ಬಳಿ ಬರುತ್ತಿಲ್ಲ, ಇದರಿಂದ
ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

