ಚಳ್ಳಕೆರೆ :
ಚಳ್ಳಕೆರೆ: ಅಪಘಾತದಲ್ಲಿ ನವಜಾತ ಶಿಶು ಬಾಣಂತಿ
ಪವಾಡದ ರೀತಿ ಪಾರು
ಬಾಣಂತಿ ಹಾಗೂ ನವಜಾತ ಶಿಶುವಿದ್ದ ಆಟೋಕ್ಕೆ ಎದುರಿನಿಂದ
ಬೈಕ್ ಡಿಕ್ಕಿ ಹೊಡೆದು 6 ಜನರಿಗೆ ಗಾಯಗಳಾಗಿದ್ದು, ನವಜಾತ ಶಿಶು
ಹಾಗೂ ಬಾಣಂತಿ ಪಾರಾದ ಘಟನೆ ಚಳ್ಳಕೆರೆ ತಾಲೂಕಿನ ದೊಡೇರಿ
ಬಳಿ ಇಂದು ನಡೆದಿದೆ.
ಚಿತ್ರದುರ್ಗದ ಕೋಡೈನಹಟ್ಟಿಯ ಸ್ವಾಮಿ
ಆಟೋದಲ್ಲಿ, ಬಾಣಂತಿ ಹಾಗೂ ನವಜಾತ ಶಿಶು ಕರೆದುಕೊಂಡು
ಪರಶುರಾಂಪುರಕ್ಕೆ ಹೋಗುವಾಗ, ಬೈಕ್ ಆಟೋಕ್ಕೆ ಡಿಕ್ಕಿ ಹೊಡೆದು,
ಆಟೋ ಪಲ್ಟಿಯಾಗಿದೆ. ಆಟೋದಲ್ಲಿದ್ದ 4 ಹಾಗೂ ಬೈಕ್ ನಲ್ಲಿದ್ದ
ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

