ಚಳ್ಳಕೆರೆ : ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸವನ್ನು ಸರಿಯಾಗಿ ನಿಭಾಯಿಸಿದರೆ ತಾಲೂಕಿನಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಎಸ್ ಸೋಮಶೇಖರ್ ಹೇಳಿದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು,
ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ, ಬಾಲ ಗರ್ಭಿಣಿ ಪೋಕ್ಸ್ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರತರಾಗಬೇಕು.
ತಳಮಟ್ಟದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಒಳಗೊಂಡ ತಂಡ ಮಕ್ಕಳ ರಕ್ಷಣೆಗೆ ಮುಂದಾಗಬೇಕು, ತಾಲೂಕಿನಲ್ಲಿ ಇರುವ ಮಕ್ಕಳ ಪ್ರಕರಣಗಳ ಅಂಕಿ ಅಂಶ ಕಡಿಮೆಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೊಂಡೊಯ್ಯಬೇಕು ಎಂದರು.
ಇನ್ನು ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಪ್ರಸ್ತುತ 2025 -26 ನೇ ಸಾಲಿನ ಕಲಿಕಾ ಗುಣಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್. ಸುರೇಶ್ ತರಾಟೆಗೆ ತೆಗೆದುಕೊಂಡರು, ತಾಲೂಕಿನಲ್ಲಿ ಇರುವಂತ ಸರ್ಕಾರಿ ಶಾಲೆಗಳಲ್ಲಿ ಒಂದು ಶಾಲೆಯಲ್ಲಿ ಕೂಡ ಶೇಕಡ 100ರಷ್ಟು ಫಲಿತಾಂಶ ಬಾರದೇ ಇರುವುದು ವಿಷಾಧನೆಯ, ಕಳೆದ ವರ್ಷಕ್ಕಿಂತ ಈ ವರ್ಷದ ಫಲಿತಾಂಶ ಶೇಕಡ 23 ರಷ್ಟು ವ್ಯತ್ಯಾಸ ಆಗಿರುವುದು ಕಂಡುಬಂದಿರುತ್ತದೆ.
ಆದ್ದರಿಂದ ಗುಣಮಟ್ಟದ ಶಿಕ್ಷಣ ನೀಡಿ ಶಿಕ್ಷಕರಿಗೆ ತರಬೇತಿ ನೀಡಿ ಕಲಿಕಾ ಗುಣಮಟ್ಟಕ್ಕೆ ಅಧಿಕಾರಿಗಳ ಶ್ರಮವೇನು, ಇನ್ನು ಅಂಗನವಾಡಿ ಕಟ್ಟಡಗಳ ಪರಿಶೀಲನೆಯ ವೇಳೆಯಲ್ಲಿ ಸಿಡಿಪಿಓ ರಾಜುನಾಯ್ಕ್ ಸಭೆಯ ಗಮನಕ್ಕೆ , ತಾಲೂಕಿನಲ್ಲಿ ಸು.54 ಕಟ್ಟಡಗಳು ಬಾಡಿಗೆ ಕೇಂದ್ರದಲ್ಲಿ ನಡೆಯುತ್ತಿವೆ, ಇನ್ನು 32 ಅಂಗನವಾಡಿ ಕೇಂದ್ರಗಳಿಗೆ ಸ್ವತಃ ನಿವೇಶನಗಳು ಇಲ್ಲದೆ ಇರುವುದರಿಂದ ಕಡತಗಳನ್ನು ಮುಂದಿನ ಹಂತಕ್ಕೆ ರವಾನಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಜೊತೆಗೆ ಮೂಲಭೂತ ಸೌಲಭ್ಯ ಅತ್ಯವಶ್ಯಕ ಆದ್ದರಿಂದ ವಿವೇಕ ಯೋಜನೆಯಲ್ಲಿ ಕೊಠಡಿಗಳ ನಿರ್ಮಿಸುವುದು ಹಾಗೂ ಶೌಚಾಲಯ ನಿರ್ಮಿಸಿಕೊಳ್ಳುವುದು ಬಡ ಮಕ್ಕಳಿಗೆ ವ್ಯಾಸಂಗದ ಹಿತದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ನೀಡುವುದು ಆದ್ಯ ಕರ್ತವ್ಯ ಎಂದು ಹೇಳಿದರು
ಹೇಳಿಕೆ :
ಮಕ್ಕಳ ರಕ್ಷಣೆಗಾಗಿ ತಾಲೂಕಿನಲ್ಲಿ ಬೀದಿ ನಾಟಕ ಹಾಗೂ ಎಲ್ಇಡಿ ಮೂಲಕ ಜನರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ, ಅಧಿಕಾರಿಗಳು ಮುಂಜಾಗ್ರತೆಯ ಕ್ರಮವಾಗಿ ಪ್ರತಿ ಹಳ್ಳಿಯಲ್ಲಿ ಹಾಗೂ ಹಟ್ಟಿಗಳಲ್ಲಿ ಸಂಜೆ ವೇಳೆ ಬೀದಿ ನಾಟಕಗಳನ್ನು ಮಾಡಿಸುವುದರ ಮೂಲಕ ಬಾಲ್ಯ ವಿವಾಹ, ಬಾಲ ಗರ್ಭಿಣಿಯರ, ಹಾಗೂ ಪೋಕ್ಸ್ ಪ್ರಕರಣಗಳು ಹೆಚ್ಚಾಗದಂತೆ ಮಕ್ಕಳ ರಕ್ಷಣೆಗೆ ಬದ್ಧರಾಗಬೇಕು …
ಜಿಎಸ್.ಸೋಮಶೇಖರ್
ಜಿಪಂ.ಸಿಇಒ.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ , ಸಮಾಜ ಕಲ್ಯಾಣ ಅಧಿಕಾರಿ ದೇವ್ಲಾನಾಯ್ಕ್,ಎಸ್ಟಿ ಹಾಸ್ಟೆಲ್ ಅಧಿಕಾರಿ ದಿವಾಕರ್,
ಬಿಸಿಎಂ ಆಡಳಿತ ಅಧಿಕಾರಿ ಲೀಲಾವತಿ, ಸಿಡಿಪಿಓ ರಾಜು ನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಆರೋಗ್ಯ ಇಲಾಖೆಯ ಡಾ.ಕಾಶಿ, ಕುದಪುರ ತಿಪ್ಪೇಸ್ವಾಮಿ, ತಾಪಂ.ಸಹಾಯಕ ನಿರ್ದೇಶಕರಾದ ಸಂತೋಷ, ಸಂಪತ್ ಮತ್ತಿತರರು ಪಾಲ್ಗೊಂಡಿದ್ದರು

