ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಸಮೀಪ ಹಾದು ಹೊಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಜರುಗಿದೆ.
ತಳಕು ಮಾರ್ಗವಾಗಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಅಕ್ಕ ತಮ್ಮ , ಹಿರಿಯೂರು ಮಾರ್ಗವಾಗಿ ಬಂದ ಕಾರು ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಜರುಗಿದೆ ಎಂದು ಸ್ಥಳಿಕರ ಮಾತಾಗಿದೆ.
ಇನ್ನೂ ತಳಕು ಮಾರ್ಗವಾಗಿ ಬೈಕ್ ನಲ್ಲಿ ಬಂದ ಅಕ್ಕ ಮಂಜಮ್ಮ, ತಮ್ಮ ಅಭಿಷೇಕ್ ಸ್ಥಳದಲ್ಲೆ ಮೃತಪಟ್ಟರೆ , ರಾಯಚೂರು ಮೂಲದ ಕಾರು ಚಾಲಕ ಗಂಭೀರವಾಗಿ ಗಾಯವಾಗಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಇನ್ನೂ ಘಟನಾ ಸ್ಥಳಕ್ಕೆ ಚಳ್ಳಕೆರೆ ಪೋಲಿಸ್ ರು ಬೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

