ಚಿತ್ರದುರ್ಗ: ಗಣಿ ಲಾರಿಗಳ ಓಡಾಟ ತಡೆಯುವಂತೆ
ರೈತರ ಪ್ರತಿಭಟನೆ
ಚಿತ್ರದುರ್ಗದ ಭೀಮಸಮುದ್ರದಲ್ಲಿ ನಿರಂತರ ಗಣಿಗಾರಿಕೆಯಿಂದಾಗಿ
ನೂರಾರು ವಾಹನಗಳು ಓಡಾಡುತ್ತಿದ್ದು, ರಸ್ತೆಗಳು ಹಾಳಾಗಿವೆ.
ಇದರಿಂದಾಗಿ ಜಮೀನುಗಳಲ್ಲಿರುವ ಬೆಳೆಗಳ ಮೇಲೆ ಧೂಳು ಕುಳಿತು
ನಾಶವಾಗುತ್ತಿದೆ. ಈ ಬಗ್ಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಗಣಿ ಲಾರಿಗಳ
ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

