ಚಳ್ಳಕೆರೆ : ಹದಿ ಹರೆಯದ ವಯಸ್ಸಿನ ವಿದ್ಯಾರ್ಥಿ ಸಮೂಹವು ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು,15 ರಿಂದ 20 ವರ್ಷದ ವಯೋಮಾನದ ಮಕ್ಕಳ ವಯಸ್ಸಿನಲ್ಲಿ ಬದಲಾವಣೆ ಅನ್ನುವುದು ಸಹಜ ಆದರೆ ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕು ಇಲ್ಲವಾದರೆ ನಿಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತೀರಿ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಎಚ್ ಆರ್ ಹೇಮಾ ಅಭಿಪ್ರಾಯಪಟ್ಟರು

ಅವರು ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮಕ್ಕೆ ಭಾಗವಹಿಸಿ ಮಾತನಾಡಿದ ಅವರು

ಏಡ್ಸ್ ರೋಗ ಅನ್ನುವುದು ಕಳೆದ ಹತ್ತು ವರ್ಷಗಳ ಹಿಂದೆ ಮಾರಣಾಂತಿಕವಾಗಿ ಹರಡಿತ್ತು, ಈ ಹಿನ್ನಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಏಡ್ಸ್ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ತುತ್ತಾಗದೆ ಹೆಚ್ಚಿನ ಸಮಯವನ್ನು ಪಠ್ಯಪುಸ್ತಕದ ಜೊತೆ ಕಳೆಯಿರಿ ಅಂದಾಗ ಮಾತ್ರ ವಿದ್ಯಾರ್ಥಿಗಳ ಜೀವನ ಸಾರ್ಥಕ ಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು

ಇನ್ನು ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಎನ್ ಕಾಶಿ ಮಾತನಾಡಿ, ಏಡ್ಸ್ ರೋಗ ಹರಡುವುದು ರಕ್ತದ ಸಂಪರ್ಕದಿಂದ ಹರಡುತ್ತದೆ, ಎಚ್ಐವಿ ಕಾಯಿಲೆಯೂ ನೀವು ಬಳಸುವ ಶೇವಿಂಗ್ ಬ್ಲೇಡ್ ನಿಂದ ಒಬ್ಬರಿಂದ ಒಬ್ಬರಿಗೆ ಶೇವಿಂಗ್ ಮಾಡಿದಾಗ ರಕ್ತದ ಸಂಪರ್ಕದಿಂದ ಹರಡುವ ಕಾಯಿಲೆ ಆಗಿದ್ದು , ಈ ಕಾಯಿಲೆಯಿಂದ ಕಳೆದು ಹತ್ತು ವರ್ಷಗಳ ಹಿಂದೆ ಮಾನವ ಸಂಕುಲಕ್ಕೆ ಮಾರಕವಾಗಿ ಬಂದು ಎಷ್ಟೋ ಜನ ಲೈಂಗಿಕ ಬಳಕೆಯಿಂದ ತಮ್ಮ ಜೀವನವನ್ನು ನರಕಕ್ಕೆ ತೆಗೆದುಕೊಂಡು ಹೋಗಿದ್ದಾರೆ ಈ ಹಿನ್ನಲೆಯಲ್ಲಿ ಎಚ್ಐವಿ ಪರೀಕ್ಷಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ಹಂತದಲ್ಲಿ ಪರೀಕ್ಷೆ ಮಾಡಲಾಗುವುದು ಎಂದರು.

ಮುಖ್ಯ ವೈದ್ಯಾಧಿಕಾರಿ ಡಾ.ಪಂಕಜ ಮಾತನಾಡಿ,
ಸೋಂಕಿತ ವ್ಯಕ್ತಯನ್ನು ಪರೀಕ್ಷೆಗೆ ಒಳಪಡಿಸಿ ಕೌನ್ಸಿಲಿಂಗ್ ಮಾಡಿ ಎಚ್ಐವಿ ಎಂದು ತಿಳಿದ ಡಾಕ್ಟರ್ ಗಳು ನಿಮ್ಮ ಜೊತೆಗೆ ಸಂಪರ್ಕಿಸಿ ಮಾನಸಿಕ ಸಮತೋಲನೆಯ ದೃಷ್ಟಿಯಿಂದ ನಿಮ್ಮ ಜೊತೆಗೆ ಮಾತನಾಡಿ ಅದರ ಬಗ್ಗೆ ತಿಳುವಳಿಕೆಯನ್ನು ಹೇಳುತ್ತಾರೆ

ಸೋಂಕು ತಗುಲಿದ ಗರ್ಭಿಣಿಯರು ಅವರಲ್ಲಿಯೂ ಕೂಡ ವೈರಸ್ಸುಗಳು ದೇಹದಲ್ಲಿ ಇರುತ್ತದೆ. ಅಂತಹ ಸೋಂಕಿತ ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಕೊಡಲಾಗುತ್ತದೆ

ಅಲ್ಲದೆ ಹೆಚ್ಚಾಗಿ ಸೋಂಕಿತ ವ್ಯಕ್ತಿಗಳು ಮೊದಲ ಹಂತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ನಂತರ ಎರಡನೇ ಹಂತದಲ್ಲಿ ಜ್ವರದ ಮೂಲಕ ಸೋಂಕು ಕಾಣಿಸಿಕೊಂಡು ದೇಹವನ್ನು ಹಿಂಡಿ ಜೀವಕ್ಕೆ ಅಪಾಯ ತರುತ್ತದೆ. ಇಂತಹ ಮಹಾ ಕಾಯಿಲೆಗೆ ಒಳಪಟ್ಟ ಸೊಂಕಿತರು ಆತಂಕ ಪಡದೆ
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿಮ್ಮ ಜೀವನದ ಸದೃಢತೆಯನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು

ಇನ್ನು ಈ ಸಂದರ್ಭದಲ್ಲಿ ಮುಖ್ಯ ಆಡಳಿತ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಡಾ.ಪಂಕಜ, ವಕೀಲರ ಸಂಘ ಅಧ್ಯಕ್ಷರಾದ ಕೆ.ಎಂ.ನಾಗರಾಜ
ಪ್ರಾಂಶುಪಾಲರಾದ ಪ್ರೋ. ಡಾ.ಕೆ.ಎಂ, ದೇವಪ್ಪ, ಬಿ.ಪಾಲಯ್ಯ, ಎಂ.ಸಿದ್ದರಾಜು, ಟಿ.ರುದ್ರಯ್ಯ,
ನಂದಾಜ್ಯೋತಿ,
ಸೇರಿದಂತೆ ಅನೇಕ ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು..

About The Author

Namma Challakere Local News
error: Content is protected !!