ಚಳ್ಳಕೆರೆ : ಹೈನುಗಾರಿಕೆಯಿಂದ ಗ್ರಾಮೀಣ ಭಾಗದ ರೈತರ ಜೀವನ ಮಟ್ಟ ಸುಧಾರಿಸಲು ರೈತರ ಮನೆಗೊಂದು ಹಸು ಸಾಕಾಣಿಕೆ ಮಾನದಂಡ ಮುಖ್ಯವಾಗಿದೆ ಎಂದು ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.

ಅವರು ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿಯಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲಿ
ಮಿಶ್ರತಳಿ ಹಸು ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸೆ ಶಿಬಿರವನ್ನು ಸಂಘದ ಅಧ್ಯಕ್ಷರಾದ ರಾಘವೇಂದ್ರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರುಗಳಾದ ಜಿ.ಪಿ. ರೇವಣಸಿದ್ದಪ್ಪ ಬಿ.ಸಿ. ಸಂಜೀವ ಮೂರ್ತಿ ಜಿ.ಬಿ. ಶೇಖರಪ್ಪ ಬಿ.ಆರ್. ರವಿಕುಮಾರ್ ,ಚಳ್ಳಕೆರೆ ಉಪ ವಿಭಾಗಾಧಿಕಾರಿಗಳಾದ ಪುಟ್ಟರಾಜು, ಹಿರಿಯೂರು ಮಾರ್ಗ ವಿಸ್ತರಣೆ ಅಧಿಕಾರಿಗಳಾದ ಎಸ್.ಜಿ. ಕೃಷ್ಣಕುಮಾರ್ ಇದ್ದರು.

ಇದೇ ಸಂದರ್ಭದಲ್ಲಿ ಉತ್ತಮವಾಗಿ ಸಾಕಲ್ಪಟ್ಟ ಜಾನುವಾರುಗಳ ಹಾಗೂ ಕರುಗಳ ಮಾಲೀಕರಿಗೆ ಬಹುಮಾನ ವಿತರಿಸಿದರು.

ಹಿರಿಯೂರಿನ ಮುಖ್ಯ ಪಶು ವೈದ್ಯರುಗಳಾದ ಡಾ. ನಾಗರಾಜ್ ಹಾಗೂ ಡಾ.ಹುಸೇನ್ ಸಾಬ್ ಮಲ್ಲಪ್ಪನಹಳ್ಳಿ ಪಶುವೈದ್ಯರು ಡಾ. ಮೋಹನ್ ಕುಮಾರ್ ಹಾಗೂ ಡಾ. ಅರುಣ್ ಡಾ. ನರೇಶ್ ಗೊಡನಳ್ಳಿ ಗ್ರಾಮ ಪಂಚಾಯತಿಯ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!