ಚಳ್ಳಕೆರೆ :

ಚಳ್ಳಕೆರೆ: ಕರೆಕಲ್ ಕೆರೆಯಲ್ಲಿ ಜಲಕ್ರೀಡೆಗೆ ಅನುಮತಿ
ನೀಡಿದೆ
ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಅವರು ತಿಳಿಸಿದಂತೆ,
ಚಳ್ಳಕೆರೆಯ ಕರೆಕಲ್ ಕೆರೆಯಲ್ಲಿ ಜಲ ಕ್ರೀಡೆಗಳು ಹಾಗೂ
ಪ್ರವಾಸೋದ್ಯಮವನ್ನು ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣಾ
ಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಿದೆ. ಜಿಲ್ಲಾಧಿಕಾರಿಗಳ
ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ
ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಜಲ ಕ್ರೀಡೆಗಳನ್ನು
ನಡೆಸಲು ನಗರಸಭೆಯು ನಿರಾಪೇಕ್ಷಣ ಪತ್ರವನ್ನು ನೀಡಿದ್ದು,
ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು
ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

About The Author

Namma Challakere Local News
error: Content is protected !!