ಪ್ರತಿಯೊಬ್ಬರೂ ಕಾನೂನು ಅರಿವು ಇರಬೇಕು ಅಪರಾಧ ಮುಕ್ತ ಸಮಾಜಕ್ಕೆ ಕೈ ಜೋಡಿಸಿ ಡಿವೈಎಸ್ಪಿ ಸತ್ಯನಾರಾಯಣ.
ನಾಯಕನಹಟ್ಟಿ -: ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ದರೋಡೆ ಪ್ರಕರಣಗಳು ಜಾಸ್ತಿ ಆಗುತ್ತವೆ ಪ್ರತಿಯೊಬ್ಬರೂ ಸಿಸಿ ಕ್ಯಾಮರಾ ಮನೆಗಳಿಗೆ ಅಳವಡಿಸಿ. ಎಂದು ಚಳ್ಳಕೆರೆ ಡಿವೈಎಸ್ಪಿ ಸತ್ಯನಾರಾಯಣ ಹೇಳಿದರು.
ಶನಿವಾರ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೋಲಿಸ್ ಚಳ್ಳಕೆರೆ ಉಪವಿಭಾಗ ತಳಕು ವೃತ್ತ ನಾಯಕನಹಟ್ಟಿ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಸರ್ವರಿಗೂ ಮಾತನಾಡಿದರು ಮಕ್ಕಳಿಗೆ ಮೊಬೈಲ್ ಕೂಡಬೇಡಿ ಮಕ್ಕಳಿಗೆ ಮೊಬೈಲ್ ಕೊಟ್ಟರೆ ಸರಿಯಾಗಿ ಶಿಕ್ಷಣ ಪಡೆಯದೆ ಮೊಬೈಲ್ ಲೋಕದಲ್ಲಿ ಮುಳುಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಾರೆ.
ಅದರಿಂದ ಪ್ರತಿಯೊಬ್ಬರು ಕಾನೂನು ಆರವು ಪಡೆದುಕೊಂಡು ಪೊಲೀಸ್ ಇಲಾಖೆಯ ಜೊತೆ ಅಪರಾಧ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದರು.
ಪಿಎಸ್ಐ ಜಿ. ಪಾಂಡುರಂಗಪ್ಪ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿಗೆ ಬಾಲ್ಯ ವಿವಾಹ ಹೆಚ್ಚಾಗಿದೆ ಪೋಷಕರು ತಮ್ಮ ಮಕ್ಕಳ ಮೇಲೆ ನಿಗವಹಿಸಿ ಸರಿದಾರಿಗೆ ತರುವ ಕೆಲಸ ಮಾಡಬೇಕು ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಹಾಕಬೇಕು ಕಾನೂನು ಪರಿಪಾಲನೆ ಮಾಡುವ ಕೆಲಸವಾಗಬೇಕು ಎಂದರು.
ಇನ್ನೂ ವೇಳೆ ನಾಯಕನಹಟ್ಟಿ ಹೋಬಳಿಯ ಹಾಗೂ ಪಟ್ಟಣದ ಸಾರ್ವಜನಿಕರು ಕಳೆದುಕೊಂಡ ಸುಮಾರು 3,50,000 ಬೆಲೆಬಾಳುವ 23 ಮೊಬೈಲ್ ಗಳನ್ನು ಸಿಇಐಆರ್ ನಿಂದ ಪತ್ತೆ ಮಾಡಿ ವಾರಸುದರಿಗೆ ಹಿಂತಿರುಗಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಗುಂತಕೋಲ್ಮನಹಳ್ಳಿ ಎಸ್ ಚಂದ್ರಣ್ಣ, ಪಾಲಯ್ಯ ,ಕೆ.ಟಿ. ಮಲ್ಲಿಕಾರ್ಜುನ್, ಜಾಕೀರ್ ಹುಸೇನ್,ಜೋಗಿಹಟ್ಟಿ ಡಿ.ಜಿ. ಗೋವಿಂದಪ್ಪ, ಎರ್ರಿಸ್ವಾಮಿ, ದಾಳಿಂಬರೆ ಮಂಜುನಾಥ್, ವೇಣು, ಜಿ.ಓ. ಓಬಳೇಶ್, ನಾಯಕನಹಟ್ಟಿ ಪೊಲೀಸ್ ಠಾಣೆಯ ಎಎಸ್ಐ ತಿಪ್ಪೇಸ್ವಾಮಿ, ರಾಘವೇಂದ್ರ ,ಭಾಷಾ, ಶ್ರೀಹರಿ, ಹಾಲೇಶ್, ಕುಮಾರ್, ವೀರೇಶ್, ದೇವರಾಜ್ ಕೋಟೆ, ತಿಮ್ಮಣ್ಣ, ಮಹಿಳಾಪೇದೆಗಳಾದ ಲಕ್ಷ್ಮಿದೇವಿ ಸುನೀತ ಸೇರಿದಂತೆ ಹೋಬಳಿಯ ವಿವಿಧ ಹಳ್ಳಿಗಳ ಸಾರ್ವಜನಿಕರು ಇದ್ದರು

