ಚಳ್ಳಕೆರೆ : ಬಯಲು ಸೀಮೆ ಪ್ರದೇಶ ಎಂದು ಹೆಸರು ಪಡೆದ ಚಳ್ಳಕೆರೆ, ಪ್ರತಿ ಬಾರಿಯೂ ಬೇಸಿಗೆ ಬಂದರೆ ಇಲ್ಲಿನ ಸಮಸ್ಯ ಹೇಳಿತೀರದು.

ರೈತರ ಬೆಳೆಗಳಿಗೆ ನೀರು ಹಾಯುಸುವುದೆ ಕಷ್ಟ ಯಾಕಂದರೆ ವಿದ್ಯುತ್ ಕಣ್ಞ ಮುಚ್ಚಾಲೆ ಆಟ.
ಇತಂಹ ಸಮಯದಲ್ಲಿ ಇತ್ತಿಚೆಗೆ ತಾಲ್ಲೂಕಿನ ಅಡಿಕೆ ಬೆಳೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದ ರೈತರು ಸುಡು ಬಿಸಿಲಿಗೆ ಅಡಿಕೆ ಉಳಿಸುವ ಹಲವು ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ.

ಅಡಿಕೆ ಬೆಳೆಗಳ ರಕ್ಷಣೆಗೆ ಸುಣ್ಣ ಇಂದು ಅಗತ್ಯವಾಗಿ ಬೇಕಿದೆ. ಅಡಿಕೆ ಗಿಡದ ಕಾಂಡ ಬಿಸಿಲಿನ ತಾಪಕ್ಕೆ ಸುಟ್ಟು ಸೀಳಿ ಹೋಗುವುದರಿಂದ ಅದರ ರಕ್ಷಣೆಗೆ ಸುಣ್ಣದ ಲೇಪನ ಮಾಡುವುದು ಸಾಮಾನ್ಯವಾಗಿದೆ.
ಅಡಿಕೆ ಬೆಳೆಯಲ್ಲಿ ಹಲವು ರೋಗ ಕಾಣಿಸಿಕೊಂಡಿದ್ದು ಇದರಲ್ಲಿ ಮುಖ್ಯವಾಗಿ ಕಾಂಡ ಬಿರುಕು ರೋಗ ಈ ರೋಗವನ್ನ ತಡೆಗಟ್ಟಲು ಅಡಿಕೆ ಮರಗ ಕಾಂಡಗಳಿಗೆ ಸುಣ್ಣ ಬಳಿಯುವುದು,ತೆಂಗಿನ ಗರಿಗಳಿಂದ ಕಾಂಡ ಒಣಗದಂತೆ ಮುಚ್ಚುವುದು,ಹಸಿರ ಅಡಿಕೆ ಗಿಡಗಳ ಅಕ್ಕ ಪಕ್ಕದಲ್ಲಿ ಹಸಿರು ಎಳೆಯ ಬೆಳೆಯನ್ನ ಹಾಕಬೇಕು ಇಂತಹ ಹಲವು ಕ್ರಮಗಳಿಂದ ಬೆಳೆಯನ್ನ ರಕ್ಷಿಸಿಕೊಳ್ಳಬೇಕು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರುಪಾಕ್ಷಪ್ಪ ತಿಳಿಸಿದ್ದಾರೆ……

About The Author

Namma Challakere Local News
error: Content is protected !!