ಚಳ್ಳಕೆರೆ :
ಚಳ್ಳಕೆರೆ: ವಾಹನಗಳ ತೀವ್ರ ತಪಾಸಣೆ ಮಾಡುತ್ತಿರುವ
ಪೊಲೀಸರು
ಚಳ್ಳಕೆರೆಯಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳ ಹಿನ್ನೆಲೆಯಲ್ಲಿ
ನಗರಠಾಣೆ ಪೊಲೀಸರು, ನಗರದ ಹೊರವಲಯದಲ್ಲಿ ವಾಹನಗಳ
ತಪಾಸಣೆಯನ್ನು ನಡೆಸುತ್ತಿದ್ದಾರೆ.
ಇಂದು ಲಾರಿಗಳು, ದ್ವಿಚಕ್ರ
ವಾಹನಗಳನ್ನು ನಿಲ್ಲಿಸಿ ಪ್ರತಿಯೊಬ್ಬರನ್ನು ಹಾಗೂ ದಾಖಲೆಗಳನ್ನು
ಪರಿಶೀಲಿಸಿದ್ದಾರೆ. ಸಾಲು ಸಾಲು ಕಳವು ಪ್ರಕರಣಗಳು,
ನಡೆದಿದ್ದರಿಂದ ಜನರು ಭಯ ಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ
ಎಚ್ಚೆತ್ತುಕೊಂಡಿರುವ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ.

