ಚಳ್ಳಕೆರೆ :

*ಅಪ್ಪು ಸ್ಟಾರ್ಸ್ ಹಾಗೂ ಆರ್ ಪಿ ಕೋಚಿಂಗ್ ಸೆಂಟರ್ ರವರ ಸಹಯೋಗದಲ್ಲಿ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನೋತ್ಸವ ಕಾರ್ಯಕ್ರಮ

ತಳಕು ಹೋಬಳಿಯ ರೇಣುಕಾಪುರ ಗ್ರಾಮದಲ್ಲಿ ಆರ್ ಪಿ ಕೋಚಿಂಗ್ ಸೆಂಟರ್ ಹಾಗೂ ಅಪ್ಪು ಸ್ಟಾರ್ಸ್ ರವರ ಸಹಯೋಗದಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ರವರ 50ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ರೇಣುಕಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಾನಜ್ಜ ಅವರು , ದೀಪವನ್ನು ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು

ಅಪ್ಪು ಸ್ಟಾರ್ಸ್ ಗ್ರೂಪ್ ನ ಅಧ್ಯಕ್ಷರಾದ ಪ್ರಭಾಕರ್ ರವರು ಈ ಕಾರ್ಯಕ್ರಮದ ಕುರಿತು ಎಲ್ಲರ ಸಹಕಾರ ಇದ್ದರೆ ಮಾತ್ರ ಇಂತಹ ಕಾರ್ಯಕ್ರಮ ಮಾಡಲಿಕ್ಕೆ ಸಾಧ್ಯ ಆಗುತ್ತೆ ಒಂದು ಕೈಯಿಂದ ಚಪ್ಪಾಳೆ ಹೊಡಿಲಿಕ್ಕೆ ಸಾಧ್ಯವಿಲ್ಲ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಎನ್ನುವ ಅರ್ಥದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿ ಇದೇ ರೀತಿ ಪ್ರತಿ ವರ್ಷ ನಾವು ಅವರ ಅಪ್ಪು ಸ್ಮರಣೆ ಮಾಡಿಕೊಳ್ಳುತ್ತಾ ಅವರ ಜನ್ಮದಿನಾಚರಣೆ ಮಾಡಬೇಕೆಂದು
ಎಲ್ಲಾ ಕನ್ನಡ ಕಲಾಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡರು

ಆರ್ ಪಿ ಕೋಚಿಂಗ್ ಸೆಂಟರ್ ನ ಸಂಸ್ಥಾಪಕರಾದ ಪ್ರದೀಪ್ ಟಿ
ಕಾರ್ಯಕ್ರಮವನ್ನು ಕುರಿತು ದೊಡ್ಮನೆ ಕುಟುಂಬದ ಗೌರವ ಘನತೆ ಹಾಗೂ ಅಲ್ಲೇ ಬೆಳೆದಂತಹ ಮರೆಯಲಾಗದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಹಕಾರವನ್ನು ಸಹಾಯವನ್ನು ನಿರ್ಗತಿಕರಿಗೆ ಅನಾಥರಿಗೆ ವೃದ್ಧರಿಗೆ ಶಾಲಾ ಮಕ್ಕಳಿಗೆ ಎಲೆ ಮರೆಕಾಯಿಯಂತೆ ಸಹಾಯವನ್ನು ಮಾಡಿ ಅಜರಾಮರವಾಗಿ ಕನ್ನಡ ಕಲಾಭಿಮಾನಿಗಳಲ್ಲಿ ಎಂದಿಗೂ ಜೀವಂತವಾಗಿದ್ದಾರೆ ಎನ್ನುವಂತಹ ಮಾತುಗಳನ್ನ ಅಪ್ಪು ಬಗ್ಗೆ ಕೆಲವೊಂದು ಹಿತನುಡಿ ಹೇಳುತ್ತಾ ಇದೇ ರೀತಿಯಾಗಿ ನಾವು ಪ್ರತಿ ವರ್ಷ ಅಪ್ಪು ಜನ್ಮ ದಿನಾಚರಣೆಯನ್ನು ಮಾಡಿ ಅವರ ದಾರಿಯಲ್ಲಿ ಅವರು ಹಾಕಿ ಕೊಟ್ಟಂತಹ ಸಹಾಯ ಹಸ್ತದ ದಾರಿಯಲ್ಲಿ ನಾವೆಲ್ಲರೂ ಕೈಲಾದಷ್ಟು ಮಟ್ಟಿಗೆ ಸಹಾಯವನ್ನು ಮಾಡಬೇಕೆಂದು ಎಲ್ಲಾ ಕನ್ನಡ ಕಲಾಭಿಮಾನಿಗಳಲ್ಲಿ ವಿನಂತಿಯನ್ನು ಮಾಡಿಕೊಂಡರು

ಮತ್ತೋರ್ವ ಆರ್ ಪಿ ಕೋಚಿಂಗ್ ಸೆಂಟರ್ ಸಂಸ್ಥಾಪಕರಾದ ರಾಜು ಮಾತನಾಡುತ್ತಾ ಕಾರ್ಯಕ್ರಮಕ್ಕೆ ನೆರವನ್ನು ನೀಡಿದಂತಹ ಎಲ್ಲಾ ಗಣ್ಯಾತಿ ಗಣ್ಯರನ್ನು ಅಭಿನಂದಿಸುತ್ತಾ ಅಪ್ಪು ಸಿಮೆಂಟ್ ಅಂಗಡಿ ಹಾಗೂ ಹಾರ್ಡ್ವೇರ್ ನ ಮಾಲೀಕರಾದ ನವೀನ್ ರಾಜಕುಮಾರ್ ಜೆ ಪಿ ಹಾಗೂ ರೇಣುಕಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಶಿ ರಾಜ್ ಬಿ ಸಿ ಇವರು ನೀಡಿದ ಧನ ಸಹಾಯದಿಂದ ಆರ್ ಪಿ ಕೋಚಿಂಗ್ ಸೆಂಟರ್ ನ ವಿದ್ಯಾರ್ಥಿಗಳಿಗೆ ಸ್ಟಡಿ ಟೇಬಲ್ ಅನ್ನ ವಿತರಿಸಲಾಯಿತು

ಅಪ್ಪು ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಕಲಾಭಿಮಾನಿಗಳಿಗೆ ಸಂಗೀತದ ರಸದೌತಣ ನೀಡಿದ ಗಾನ ಮಾಂತ್ರಿಕ ಮುತ್ತುರಾಜ್ ರವರು ,ಪ್ರದೀಪ್ ಟಿ, ರಾಜು ಜೆ ,ಹರ್ಷವರ್ಧನ್ ಹೆಚ್‌ ಪಿ ,ಅಮೃತ ಮುಂತಾದ ಗಾಯಕರು ಅಪ್ಪು ಅವರು ನಟಿಸಿರುವ ಚಲನಚಿತ್ರದ ಗೀತೆಗಳನ್ನು ಹಾಡಿದರು ಜೊತೆಗೆ ಆರ್.ಪಿ ಕೋಚಿಂಗ್ ಸೆಂಟರ್ ನ ವಿದ್ಯಾರ್ಥಿಗಳು ನೃತ್ಯಗಳನ್ನು ಮಾಡಿ ಅಪ್ಪು ಅಭಿಮಾನಿಗಳನ್ನ ರಂಜಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾನಜ್ಜ ಮಾಜಿ ಅಧ್ಯಕ್ಷರಾದ, ರಾಮಕ್ಕ, ದೇವಿರಮ್ಮ ಈರಣ್ಣ ,ಯಜಮಾನ ವೆಂಕಟೇಶಪ್ಪ ಸರ್ವೋದಯ ಶಾಲೆಯ ಮುಖ್ಯ ಶಿಕ್ಷಕರಾದ ಕೆ ಆರ್ ಹರೀಶ್ ಶಿವಪ್ರಸಾದ್ ,ತಮ್ಮಣ್ಣ ,ತಾರೇಶ್ ಕಾಂಗೋ ಮಾಸ್ಟರ್ ಉಪ್ಪಿ, ಆರ್‌ ಪಿ ಕೋಚಿಂಗ್ ಸೆಂಟರ್ ನ ಎಲ್ಲಾ ವಿದ್ಯಾರ್ಥಿಗಳು
ಅವರ ಪೋಷಕರು ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!