ಚಳ್ಳಕೆರೆ : ಸಮುದಾಯದ ಧುರೀಣ, ಹಿರಿಯ ಮುತ್ಸದಿ, ನೂರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿದ ಮಹಾನ್ ಯುಗ ಪುರುಷ ದಿ.ಬಿ.ವಿ.ಸಿರಿಯಣ್ಣ ನರವರ ಹೆಸರು ಶಾಶ್ವತವಾಗಿ ಉಳಿಯಲು ಅವರ ಹೆಸರನ್ನು ನಗರಸಭೆ ವ್ಯಾಪ್ತಿಯ ಮೇಲೆ ರಸ್ತೆಗೆ ನಾಮಕರಣ ಮಾಡುವುದು ಅವರಿಗೆ ಗೌರವ ಸಲ್ಲಿಸಿದಂತೆ.
ಅದರಂತೆ ನಗರದ ವಾರ್ಡ್ ನಂಬರ್ 11 ರ ಚಿತ್ರದುರ್ಗ ಮುಖ್ಯರಸ್ತೆಯ ಪೊಲೀಸ್ ಉಪಾದೀಕ್ಷಕರ ಕಚೇರಿಯಿಂದ ಯಾದವ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ಟೆಲಿಫೋನ್ ಟವರ್ ವರೆಗೆ ” ಶ್ರೀ ಬಿವಿ ಸಿರಿಯಣ್ಣ ಮಾಸ್ಟರ್ ರಸ್ತೆ ” ಎಂದು ನಾಮಕರಣದ ಬಗ್ಗೆ ಪ್ರಸ್ತಾಪಿಸಿ
ಅಕ್ಟೋಬರ್ 31 ರ 2025 ರಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ
ಸದಸ್ಯರಾದ ಎಸ್ ಜಯಣ್ಣನವರ ಮನವಿಯಂತೆ ಒಪ್ಪಿ ತೀರ್ಮಾನಿಸಲಾಯಿತು.
ಆದ್ದರಿಂದ ಯಾದವ ಸಮಾಜದ ಮುಖಂಡರಿಂದ, ಬಿ ವಿ ಸಿರಿಯಣ್ಣ ಮಾಸ್ಟರ್ ಅಭಿಮಾನಿಗಳಿಂದ ನಗರಸಭಾ ಸದಸ್ಯರಾದ ಎಸ್ ಜಯಣ್ಣನವರಿಗೆ ಅಭಿಮಾನದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಜ್ಜಪ್ಪನವರು, ನಿವೃತ್ತ ಪ್ರಾಚಾರ್ಯರಾದ ದೇವಿರಪ್ಪ, ಉದ್ಯಮಿಯಾದ ರವೀಂದ್ರ ಆಚಾರ್, ನಿವೃತ್ತ ಕೆಇಬಿ ಅಧಿಕಾರಿಯಾದ ಚಿಕ್ಕಣ್ಣ, ನಿವೃತ್ತ ಅಧಿಕಾರಿಯದ ದೊಡ್ಡೇರಿ ಮಂಜಣ್ಣ, ಗೊಲ್ಲ ನೌಕರರ ಸಂಘದ ಗೌರವಾಧ್ಯಕ್ಷರಾದ ಪ್ರೊಫೆಸರ್ ಮಂಜುನಾಥ್ ಯಾದವ್ ಎಸ್ , ಗೊಲ್ಲ ನೌಕರರ ಸಂಘದ ಕಾರ್ಯದರ್ಶಿಯಾದ ಶಿಕ್ಷಕರಾದ ಎಸ್ ನಾಗರಾಜ್ , ಯಾದವ ಸಮಾಜದ ಮುಖಂಡರು ಹಾಗೂ ತಾಲೂಕು ಗೊಲ್ಲರ ಸಂಘದ ನಿರ್ದೇಶಕರಾದ ತಿಪ್ಪೇಸ್ವಾಮಿ, ಮಾಜಿ ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಕಾಟಪ್ಪನಟ್ಟಿ ವೀರೇಶ್, ಗೋಕುಲ ಪತ್ತಿನ ಸೌಹಾರ್ದ ಸಹಕಾರ ನಿಯಮಿತ ಬ್ಯಾಂಕ್ ಮ್ಯಾನೇಜರ್ ಆದ ಜಿಪಿ ಶಶಿಧರ್ , ದೇವರ ಮರಕುಂಟೆಯ ಈರಣ್ಣ ಹೆಗಡೆ, ಉಪ್ಪಾರಟ್ಟಿ ಕ್ಯಾತಯ್ಯ ಮತ್ತಿತರು ಇದ್ದರು.

