ಚಳ್ಳಕೆರೆ : ಶಕ್ತಿ ಕಳೆದುಕೊಂಡ ಶಕ್ತಿ ಯೋಜನೆ, ಮಳೆ ಬಂದರೆ ಸೋರುವ ಕೆಎಸ್ ಆರ್ ಟಿಸಿ ಬಸ್ಸುಗಳು, ಹೌದು ಇದು ಚಳ್ಳಕೆರೆ ಮಾರ್ಗದ ಮೂಲಕ ಚಿತ್ರದುರ್ಗ ಮಾರ್ಗವಾಗಿ ಸಂಚರಿಸುವ ಸರಕಾರಿ ಬಸ್ ಗಳ ಮಳೆ ಬಂದರೆ ಸೋರುವ ಬಸ್ ಗಳನ್ನು ರಸ್ತೆಗಿಳಿಸಿದ ಸರಕಾರದ ವಿರುದ್ಧ ಚಳ್ಳಕೆರೆ
ತಾಲೂಕಿನ ರೈತ ಮುಖಂಡ ಡಾ.ಆರ್ ಎ. ದಯಾನಂದಮೂರ್ತಿ ಕಿಡಿಕಾರಿದ್ದಾರೆ.

ಜನರಿಂದ ತೆರಿಗೆ ವಸೂಲಿ ಮಾಡಿಕೊಂಡಂತಹ ಸರ್ಕಾರ ಸರಿಯಾದ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ನೀಡಬೇಕು, ಕೇವಲ ತೆರಿಗೆ ವಸೂಲಿಮಾಡಿಕೊಂಡ ಸರ್ಕಾರ ಹಳೆಯದಾದ ಗುಜುರಿ ಬಸುಗಳನ್ನು ರಸ್ತೆಗಿಳಿಸಿ ಮಳೆ ಬಂದರೆ ಸಾಕು ಸೋರುತ್ತಿವೆ, ಇದರಿಂದ ಪ್ರಯಾಣಿಕರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ, ಪ್ರಯಾಣಿಕರ ಲಗೇಜ್ ಗಳು ಎಲ್ಲಾ ನೀರಿನಲ್ಲಿ ನೆನೆಯುತ್ತಿವೆ, ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೇ ಜನರಿಗಾಗಿ ಉತ್ತಮವಾದಂತಹ ಬಸ್ಸುಗಳನ್ನು ರಸ್ತೆಗಿಳಿಸಬೇಕು ಶಕ್ತಿ ಯೋಜನೆ ಅಡಿಯಲ್ಲಿ ಉತ್ತಮ ಸೇವೆ ಹೊದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!