ಚಳ್ಳಕೆರೆ : ರಸ್ತೆ ಅಗಲೀಕರಣ ನೆಪದಲ್ಲಿ ನೂರಾರು ಮರಗಳ ಮಾರಣಹೋಮ ಮಾಡುವ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ ಹೊರಹಾಕಿದ್ದಾರೆ.
ಹೌದು ಚಳ್ಳಕೆರೆ ನಗರ ಬೃಹತ್ ಹಾಗಿ ಬೆಳೆಯುವ ನಗರವಾಗಿದೆ , ಜಿಲ್ಲೆಯಲ್ಲಿ ಅತೀ ವೇಗ ಪಡೆದುಕೊಂಡ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಆದರೆ ರಸ್ತೆ ಅಗಲೀಕರಣ ನೆಪದಲ್ಲಿ ನೂರಾರು ಮರಗಳಿಗೆ ಕೊಡಲಿ ಪೆಟ್ಟುನೀಡಿವುದು ಮಾತ್ರ ಖಂಡನೀಯ ,
ಬಯಲು ಸೀಮೆಗೆ ಹೆಸರು ವಾಸಿಯಾದ ಚಳ್ಳಕೆರೆ ತಾಲೂಕು ಬಿಸಲಿನ ಒಣ ಹವೆ ಮನುಷ್ಯನ ಜೀವಕ್ಕೆ ಕುತ್ತು ತರುವಂತೆ ಎಲ್ಲಿ ನೋಡಿದರೂ ಉರಿಬಿಸಿಲು, ಬಿಸಿ ಜಳ ಮನುಷ್ಯನಿಗೆ ತಾಗುತ್ತದೆ , ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಮರ ಕುಡಿಯುವುದು ಒಂದು ನೆಪವಾಗಿ ಪರಿಣಮಿಸಿದೆ.
ಒಂದು ಮರ ಕಡಿದರೆ ಮತ್ತೊಂದು ಸಸಿ ನೆಡುವ ಯೋಜನೆ ಸರಕಾರ ರೂಪಿಸಿದೆ ಆದರೆ ಅದ್ಯಕೋ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದು ಯಾರೇ ಮರ ಕಡಿಯಲು ಪರವಾನಿಗೆ ಕೇಳಿದರೆ ಹಿಂದೂ ಮುಂದು ನೋಡದೆ ಮರ ಕಡಿಯಲು ಪರವಾನಿಗೆ ಕೊಡುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅದರಂತೆ ಚಿತ್ರದುರ್ಗ ರಸ್ತೆಯಲ್ಲಿ ಇಂದು ಸುಮಾರು ಮೂವತ್ತು ಮೂರು ಮರಗಳನ್ನು ಕಡಿಯಲು ಪರವಾನಿಗೆ ನೀಡಿದ ಅರಣ್ಯ ಇಲಾಖೆ ಕಳೆದ ವರ್ಷದಲ್ಲಿ ಬಳ್ಳಾರಿ ರಸ್ತೆ ಅಭಿವೃದ್ಧಿಗೆ ಅಡ್ಡವಾದ ಮರಗಳು ತೆಗೆಯಲು ಅಲ್ಲಿ ಕೂಡ ಮೂವತ್ತು ಮರಗಳಿಗೆ ಕೊಡಲಿ ಪೆಟ್ಟು ನೀಡಿದ್ದರು.
ಇದರಿಂದ ಈಡೀ ನಗರದಲ್ಲಿ ಒಂದು ಮರ ಕೂಡ ಉಳಿಯದೆ ರಸ್ತೆ ಅಗಲೀಕರಣ ನೆಪದಲ್ಲಿ ಬರಡಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

