ಚಳ್ಳಕೆರೆ :
ಬೀದಿಬದಿಯ ವ್ಯಾಪಾರಸ್ಥರು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬನ್ನಿ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪ ಮುರುಳಿಧರ್ ಕರೆ ನೀಡಿದರು.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಬೀದಿಬದಿಯ ವ್ಯಾಪಾರಸ್ಥರ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು
ಬೀದಿ ಬದಿಯ ವ್ಯಾಪಾರಸ್ಥರು ನಗರಸಭೆ ಯಿಂದ ಸಿಗುವು ಸಬ್ಸಿಡಿ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು, ಇನ್ನೂ ರಸ್ತೆಯ ಪಕ್ಕದ ಪುಟ್ ಬಾತ್ ಮೇಲೆ ಅಂಗಡಿ ಮುಗ್ಗಟ್ಟು ಇಟ್ಟುಕೊಳ್ಳದೆ ಸೂಕ್ತವಾದ ಜಾಗದಲ್ಲಿ ನಿಮ್ಮವ್ಯಾಪಾರ ವಹಿವಾಟು ನಡೆಸಿಕೊಳ್ಳಿ, ನಗರಸಭೆ ಸಿಬ್ಬಂದಿ ನಿಮ್ಮ ಜೊತೆಗೆ ಸದಾ ಇರುತ್ತಾರೆ, ಇನ್ನೂ ಸಬ್ಸಿಡಿ ಯೋಜನೆಗೆ ನಗರಸಭೆಗೆ ಅರ್ಜಿ ಸಲ್ಲಿಸಿ ಯೋಜನೆ ಪಡೆದುಕೊಳ್ಳಿ ಎಂದರು.
ಇನ್ನೂ ನಗರಸಭೆ ಯೋಜನೆ ಅಧಿಕಾರಿ ಭೂತಯ್ಯ ಮಾತನಾಡಿ, ಪಿಎಂ ಸ್ವಾ ನಿಧಿ ಯೋಜನೆ, ಜೀವನ್ ಜ್ಯೋತಿ ಭೀಮ ಯೋಜನೆ, ದೀನ ದಯಾಳ್ ಯೋಜನೆ ಈಗೇ ಸರಕಾರದ ಹಲವು ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು, ಪ್ಲಾಸ್ಟಿಕ್ ಮುಕ್ತ ನಗರಸಭೆ ಮಾಡಬೇಕು ಎಂದರು.
ನಗರಸಭೆ ಪರಿಸರ ಇಂಜಿನಿಯರ್ ನರೇಂದ್ರ ಬಾಬು ಮಾತನಾಡಿ, ಬೀದಿ ಬದಿಯ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು, ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಬರುವ ಲಕ್ಷಣಗಳು ಕಂಡುಬಂದಿವೆ, ಆದ್ದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಬಾಳೆ ಎಲೆ, ಇಸ್ತ್ರಿ ಎಲೆ ಬಳಸಿಕೊಡು ಆಹಾರ ಪದಾರ್ಥಗಳನ್ನು ನೀಡಿ ವ್ಯಾಪಾರ ನಡೆಸಿ ಎಂದು ತಿಳಿಸಿದರು.
ಕಾರ್ಮಿಕ ಮುಖಂಡ
ಶಿವರುದ್ರಪ್ಪ ಮಾತನಾಡಿ, ನಗರಸಭೆಯಿಂದ ನೀಡುವ ಬೀದಿ ಬದಿಯ ವ್ಯಾಪಾರಸ್ಥರ
ಸಾಲ ದುರುಪಯೋಗ ಹಾಗುತ್ತಿರುವುದು ಕೇಳಿಬರುತ್ತದೆ, ಆದ್ದರಿಂದ ಬ್ಯಾಂಕ್ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳು ಈ ಯೋಜನೆಯನ್ನು ಸಿಕ್ಕ ಸಿಕ್ಕವರಿಗೆ ನೀಡದೆ ಉಪಯುಕ್ತ ವಾಗುವ ರೀತಿಯಲ್ಲಿ ಸಾಲ ಸೌಲಭ್ಯ ನೀಡಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ಪೌರಾಯುಕ್ತ ಜಗರೆಡ್ಡಿ, ಎಐಟಿಯುಸಿ ಅಧ್ಯಕ್ಷ ಶಿವರುದ್ರಪ್ಪ,
ಬೀದಿಬದಿಯ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು, ಕೆನರಾ ಬ್ಯಾಂಕ್ ಮ್ಯಾನೇಜರ್ ಸಾಗರ್, ನಗರಸಭೆ ಸಿಬ್ಬಂದಿ ಭೂತಯ್ಯ,
ನರೇಂದ್ರ ಬಾಬು, ಸಾರ್ವಜನಿಕರು ಇತರರು ಪಾಲ್ಗೊಂಡಿದ್ದರು


