ಚಳ್ಳಕೆರೆ :
ನಗರದ ಸೌಂದರ್ಯ ಹೆಚ್ಚಿಸಲು ನಗರಸಭೆ ಯೊಂದಿಗೆ ಸಂಘ ಸಂಸ್ಥೆಗಳು, ದಾನಿಗಳು ಕೈ ಜೋಡಿಸಿದಾಗ ಮಾತ್ರ ಸ್ವಚ್ಚನಗರ, ಸೌಂದರ್ಯ ನಗರವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪ ಮುರುಳಿಧರ್ ಹೇಳಿದರು,
ಅವರು ನಗರದ ನಗರಸಭೆ ಮುಂಬಾಗದ ಕಾಂಪೌಂಡ್ ಗೋಡೆಗೆ ಬಿತ್ತಿ ಚಿತ್ರಗಳನ್ನು ಬರೆಸುವುದರ ಮೂಲಕ ನಗರಸಭೆ ಸೌಂದರ್ಯ ಹೆಚ್ಚಿಸಲಾಗುತ್ತದೆ, ಪಾದಚಾರಿಗಳು ಪುಟ್ ಬಾತ್ ಮೇಲೆ ನಡೆದುಕೊಂಡು ಹೋಗುವಾಗ ಉತ್ತಮ ಸಂದೇಶಗಳನ್ನು ಹಾಗೂ ನಗರಸಭೆ ಘನ ತ್ಯಾಜ್ಯ ವಿಲೇವಾರಿಯ ಒಣ ಕಸ, ಹಸಿ ಕಸದ ಬಗ್ಗೆ ಮಾಹಿತಿ ಚಿತ್ರ, ಸಾಹಿತಿಗಳ ಭಾವ ಚಿತ್ರ, ಸ್ವಾತಂತ್ರ್ಯ ಹೋರಾಟಗಾರರ ಭಾವ ಚಿತ್ರವನ್ನು ಬಿಡಿಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸಲಾಗುತ್ತದೆ ಎಂದರು.
ಇನ್ನೂ ಉಪಾಧ್ಯಕ್ಷೆ ಕವಿತಾ ಬೋರಯ್ಯ ಮಾತನಾಡಿ, ನಮ್ಮ ನಗರ ಸ್ವಚ್ಚ ನಗರ ಎಂಬ ಧ್ಯೇಯ ವಾಕ್ಯ ದೊಂದಿಗೆ ನಗರದ ಸೌಂದರ್ಯಕ್ಕಾಗಿ ಈ ಯೋಜನೆ ರೂಪಿಸಲಾಗಿದೆ, ದಾನಿಗಳೇ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ನಗರದ ಸೌಂದರ್ಯಕ್ಕೆ ನಮ್ಮದು ಕೊಡುಗೆ ಇರಲಿ ಎಂದು ಉತ್ತಮ ಸಂದೇಶ ರವಾನೆಯಾಗಲಿ ಎಂದು ಕಂಕಣಬದ್ದರಾಗಿದಾರೆ, ದೇಶದ ಹಲವಾರು ಸಾಹಿತಿಗಳು, ಲೇಖಕರು, ಭಾವಚಿತ್ರಗಳನ್ನು ಬಿಡಿಸಿ ಯುವ ಪೀಳಿಗೆಗೆ ಉತ್ತಮ ಮೌಲ್ಯಗಳನ್ನು ಮೂಡಿಸಲು ಅನುಕೂಲಕರವಾಗುತ್ತದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಮಾತನಾಡಿ, ನಗರದ ಲೋಕೋಪಯೋಗಿ ಇಲಾಖೆಯ ಕಾಂಪೌಂಡ್ ನಿಂದ ಚಿತ್ರದುರ್ಗ ರಸ್ತೆಯ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಕಾಂಪೌಂಡ್ ಗೋಡೆಯವರೆಗೆ ಮಹಾನೀಯರ ಭಾವಚಿತ್ರಗಳನ್ನು ಬಿಡಿಸಲಾಗುವುದು, ಇನ್ನೂ ಈ ಯೋಜನೆಗೆ ಸಂಘ ,ಸಂಸ್ಥೆಗಳು, ದಾನಿಗಳು ಕೈ ಜೋಡಿಸಿದ್ದಾರೆ, ಮಾದರಿ ನಗರಕ್ಕೆ ಪ್ರತಿಯೊಬ್ಬರೂ ಕಟಿಬದ್ದರಾಗಿರೆ ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಸದಸ್ಯೆ ಕೆ.ವೀರಭದ್ರಪ್ಪ, ರಮೇಶ್ ಗೌಡ, ಪೌರಾಯುಕ್ತ ಜಗರೆಡ್ಡಿ, ಪರಿಸರ ಇಂಜಿನಿಯರ್ ನರೇಂದ್ರ ಬಾಬು, ಆರೋಗ್ಯ ಸಹಾಯಕ ಅಧಿಕಾರಿ ಮಹಾಲಿಂಗಪ್ಪ , ಮುಖಂಡ ಗಾಂಧಿನಗರದ ಕೃಷ್ಣಾ ಮೂರ್ತಿ, ಮುರುಳಿಧರ್, ಬೋರಯ್ಯ, ಇತರರು ಹಾಜರಿದ್ದರು.


