ಕಲಿಕಾ ಹಬ್ಬ ಮಕ್ಕಳಿಗೆ ಹೊಸ ಉತ್ಸಾಹ ನೀಡುತ್ತದೆ: ಪ. ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್.
ನಾಯಕನಹಟ್ಟಿ : ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಫ್ಎಸ್ಎಲ್ ಕಲಿಕಾ ಹಬ್ಬ 2025 ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕಲಿಕಾ ಹಬ್ಬ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶಿಕ್ಷಣದ ಜೊತೆಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಕಲಿಕಾ ಹಬ್ಬ ಪ್ರಯೋಜನವಾಗುತ್ತದೆ ಎಂದರು.
ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರಿದರ್ಶಿ ಸದಾಶಿವಯ್ಯ ಆರ್ ಮಾತನಾಡಿ ಕಲಿಕಾ ಹಬ್ಬ ಒಂದು ಮಕ್ಕಳ ಕಲಿಕೆ ಗೋಸ್ಕರ ಸರ್ಕಾರ ಆಯೋಜನೆ ಮಾಡಿರುವ ಕಾರ್ಯಕ್ರಮ. ಅದರಲ್ಲಿ ಅಕ್ಷರಗಳನ್ನು ಗಟ್ಟಿಯಾಗಿ ಓದುವುದು, ಕೈಬರಹ, ರಸಪ್ರಶ್ನೆಗಳಲ್ಲಿ ಭಾಗವಹಿಸುವುದು, ಮಕ್ಕಳು ಎಲ್ಲಾ ಕಲಿಕೆಗಳಲ್ಲಿ ಭಾಗವಹಿಸಬೇಕು ಎಂಬುದೇ ಸರ್ಕಾರದ ಉದ್ದೇಶವಾಗಿದೆ. ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ ಈ ರೀತಿ ಕಲಿಕೆಗಳನ್ನು ಕಲಿಸಿರಲಿಕ್ಕೋಸ್ಕರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಎನ್ ಇಂದ್ರಮ್ಮ, ನಾಯಕನಹಟ್ಟಿ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಆರ್ ಈಶ್ವರಪ್ಪ, ನಾಯಕನಹಟ್ಟಿ ಹೋಬಳಿ ಶಿಕ್ಷಕರ ಬಳಗದ ಅಧ್ಯಕ್ಷ ತಿಪ್ಪೇರುದ್ರಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮನ್ಮನೆಹಟ್ಟಿ ಬಡ್ತಿ ಮುಖ್ಯೋಪಾಧ್ಯಾಯ ವಿಜಯ್ ಕುಮಾರ್, ಹೊಸ ಜೋಗಟ್ಟಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಕ ಯತೀಶ್ ಹಾಗೂ ತೀರ್ಪುಗಾರರು, ಕ್ಲಸ್ಟರ್ನ ಶಿಕ್ಷಕರು, ಶಿಕ್ಷಕಿಯರು, ವಿವಿಧ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಬಿಸಿಯೂಟ ಕಾರ್ಯಕರ್ತರು ಇನ್ನು ಮುಂತಾದವರು ಹಾಜರಿದ್ದರು.

