ಚಳ್ಳಕೆರೆ :
ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ವಾಲ್ಮೀಕಿ ಸಮಾಜ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ಹೇಳಿದರು
ನಾಯಕನಹಟ್ಟಿ : ಹೋಬಳಿಯ ರಾಮಸಾಗರದಲ್ಲಿ ಗಾದ್ರಿಪಾಲನಾಯಕ ದೇವಸ್ಥಾನದ ಕಳಶ ಧಾರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ.
ಹಿಂದೂ ಸನಾತನ ಸಂಸ್ಕೃತಿ ಶ್ರೀಮಂತ ವಾಗಬೇಕಾದರೆ ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯದವರು ಕೈಗೊಳ್ಳುವಂತಹ ಇಂಥ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲ ಕಾರಣವಾಗಿವೆ.
ಈ ಬುಡಕಟ್ಟು ಸಮುದಾಯಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರಂತ ಸಾಮಾಜಿಕ ಪರಿವರ್ತನೆಯ ಸಂದೇಶಗಳನ್ನು ಕೂಡ ಪರಿಪಾಲಿಸುತ್ತಿವೆ.
ಚಿತ್ರದುರ್ಗದ ಪರಂಪರೆ ಮತ್ತು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತ ಗಾದ್ರಿಪಾಲ ನಾಯಕ ಮತ್ತು ಎರಮಂಚ ನಾಯಕ ದೇವರುಗಳ ಆರಾಧನೆಯು ಈ ಜನಾಂಗಗಳಿಗೆ ಈ ಜನಾಂಗಗಳಿಗೆ ಸ್ವಾಭಿಮಾನದ ಸಂಕೇತವಾಗಿದೆ.
ಕಟ್ಟು ನಿಟ್ಟಿನ ವ್ರತಾ ಮತ್ತು ಪೂಜಾ ವಿಧಿ ವಿಧಾನಗಳು ಇವರ ಶಿಸ್ತುಏಕಾಗ್ರತೆಯನ್ನು ಹೆಚ್ಚಿಸಿವೆ
ಈ ದೇವರ ಆರಾಧನೆಯಿಂದ ಮತ್ತು ಹೊಸ ವರ್ಷದ ಈ ದಿನದ ಪೂಜೆಯಿಂದ ಸಮಸ್ತ ತಾಲ್ಲೂಕಿನ ಜನತೆಯ ಬದುಕು ಹಸನಾಗಲಿ ಈ ಭಾಗದ ರೈತರು ನಿರೀಕ್ಷಿಸಿದಂತೆ ನೆಮ್ಮದಿಯ ಬದುಕು, ನಿಮ್ಮದಾಗಲಿ ಎಂದು ಆಶಿಸಿದರು.
ಆರಕ್ಷಕ ಸಿಪಿಐ. ಉಮೇಶ್ ಮಾತನಾಡಿ, ಈ ಬುಡಕಟ್ಟು ಸಮುದಾಯದವರು ಪುರಾಣಗಳು ಹೇಳುವಂತೆ ಈ ದೇಶದ ಮೂಲ ನಿವಾಸಿಗಳು ಇವರ ಆಚರಣೆ ಮತ್ತು ಸಂಪ್ರದಾಯಗಳು ವಿಶಿಷ್ಟವಾದಂತ ಆಗಿರುತ್ತವೆ.
ಈ ಆಚರಣೆಗಳಿಂದ ಮನುಕುಲ ಮತ್ತು ಸಮಾಜಕ್ಕೆ ಒಳಿತನ್ನೇ ಕೋರುವುದಾಗಿದೆ.
ಮೂರು ಸಾವಿರ ವರ್ಷಗಳ ಇತಿಹಾಸ ಇರುವಂತ ಈ ಸಮಾಜ ಪರಂಪರೆ ಇದ್ದರೂ ಕೂಡ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೆಚ್ಚಿನ ರೀತಿಯ ಪ್ರಗತಿ ಕಾಣುವುದು ಅನಿವಾರ್ಯವಾಗಿದೆ.
ಈ ದಿಕ್ಕಲ್ಲಿ ಸಮುದಾಯದ ಎಲ್ಲರೂ ಕೂಡ ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರದ ತಿಪ್ಪೇಸ್ವಾಮಿ,ಮಹಾಂತೇಶ, ಶಿವಣ್ಣ ವಾಲ್ಮೀಕಿ ಸಮಾಜದ ಮುಖಂಡರು ಯುವಕರು ಮತ್ತು ಭಕ್ತಾದಿಗಳು ಇನ್ನು ಇತರರು ಇದ್ದರು.

