ಚಳ್ಳಕೆರೆ : 2025-26ನೇ ಸಾಲಿನಲ್ಲಿ ಹಿಂದೂಳಿದ ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳಿಂದ ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದು
ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ದತ್ತು ಕಾರ್ಯಕ್ರಮವನ್ನು
ಆರಂಭಿಸಲಾಗುದೆ,’ ಸರಕಾರದ ಆಶಯದಂತೆ “ಕಾಯಕ ಗ್ರಾಮ”
ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು ಏಳು ಗ್ರಾಮ ಪಂಚಾಯತಿ ಗಳು ದತ್ತು ಗ್ರಾಮಗಳ ಕಾಯಕ ಗ್ರಾಮ ದಲ್ಲಿ ಸೇರಿವೆ ಅದರಂತೆ ಮುಖ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಹಾಗೂ ರಾಜ್ಯಮಟ್ಟದ ನೋಡಲು ಅಧಿಕಾರಿ ಇವರಿಗೆ ರೇಣುಕಾಪುರ , ಪಗಡಲ ಬಂಡೆ , ಚಳ್ಳಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಚೌಳೂರು , ಗೌಡಗೆರೆ ಗ್ರಾಮ ಪಂಚಾಯಿತಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಸಂಪತ್ ಕುಮಾರ್ ಅವರಿಗೆ ಸೋಮಗುದ್ಧ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಂತೋಷ ರವರಿಗೆ ಪಿ ಮಹದೇವಪುರ ಗ್ರಾಮ ಪಂಚಾಯತಿ ಕಾಯಕ ಗ್ರಾಮ ಯೋಜನೆಯಲ್ಲಿ ನಿಗಧಿ ಮಾಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಿ.ಮಹಾದೇವಪುರ ಗ್ರಾಮ ಪಂಚಾಯತಿಯಲ್ಲಿ ನಿಗಧಿ ಪಡಿಸಿರುವ ಗುರಿಯಂತೆ ಮುನ್ನಡೆಯುತ್ತಿದೆ, ಅದರಂತೆ ಗ್ರಾಮ, ಸಭೆ ಮೂಲಕ ಆಡಳಿತ, ಸ್ವಚ್ಚತೆ, ಬೀದಿ ದೀಪ, ಈ ಆಸ್ತಿ ಈಗೇ ಹಲವು ಯೋಜನೆಗಳ ಕಾರ್ಯರೂಪಕ್ಕೆ ಜಾರಿಗೊಳಿಸುತ್ತಿದೆ.
ಅದರಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೊನ್ನುರಪ್ಪ ರವರು ಗ್ರಾಮ ಪಂಚಾಯತಿ ಸರ್ವ ಸದಸ್ಯರ ಒಳಗೊಂಡಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ
ವಿಭಾಗವು ಸಿದ್ಧಪಡಿಸುವ Gram Panchayat Performance Ranking ನಲ್ಲಿ ಹಿಂದುಳಿದಿರುವ ಗ್ರಾಮ
ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ದತ್ತು ಪಡೆದು
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಪಂಚಾಯಿತಿ
ಕಾರ್ಯನಿರ್ವಹಣೆ, ನಿಯಮಿತವಾಗಿ ವಿವಿಧ ಸಭೆಗಳ ಆಯೋಜನೆ, ತೆರಿಗೆ ವಸೂಲಾತಿ, ನರೇಗಾ, ಸ್ವಚ್ಛ
ಭಾರತ್ ಮಿಷನ್-ಗ್ರಾಮೀಣ, ಜಲ ಜೀವನ್ ಮಿಷನ್, ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ಕೇಂದ್ರ
ಹಣಕಾಸು ಆಯೋಗದ ಅನುದಾನ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸಲು “ಗ್ರಾಮ ಪಂಚಾಯತಿ
ದತ್ತು” ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ವಿಭಾಗವು
ಸಿದ್ಧಪಡಿಸಿರುವ Gram Panchayat Performance Ranking ನಲ್ಲಿ ಹಿಂದುಳಿದಿರುವ ಗ್ರಾಮ
ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ರಾಜ್ಯ ಮಟ್ಟದ
ಅಧಿಕಾರಿಗಳು ಆಯ್ಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ
ಪರಿಣಾಮಕಾರಿ ಅನುಷ್ಠಾನ, ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ, ನಿಯಮಿತವಾಗಿ ವಿವಿಧ ಸಭೆಗಳ
ಆಯೋಜನೆ, ತೆರಿಗೆ ವಸೂಲಾತಿ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ಕಾರ್ಯಕ್ರಮದ
ಉದ್ದೇಶವಾಗಿರುತ್ತದೆ.

