ಚಳ್ಳಕೆರೆ :
ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವನ್ನು ಚಳ್ಳಕೆರೆ ನಗರದ ನರಹರನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಗುತ್ತದೆ ಎಂದು ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವೀರಭದ್ರಪ್ಪ ಸ್ವಾಮೀಜಿ ಹೇಳಿದರು.
ಅವರು ನಗರದ ಶ್ರೀ ಗುರುಕರಿಬಸವೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದರು,
ನಗರದಲ್ಲಿ ಫೆ.11-12 ರಂದು
ಎರಡು ದಿನಗಳ ಕಾಲ ನರಹರಿನಗರ ಚಳ್ಳಕೆರೆಯಲ್ಲಿ ನಡೆಯಲಿದ್ದು ಈ ಎರಡು ದಿನಗಳ ಕಾಲ ದಾರ್ಮಿಕ ಭಕ್ತಿ ಪಡುಮುಟ್ಟುತ್ತದೆ,
ಇನ್ನೂ ಹೊರ ಜಿಲ್ಲೆಯ ಐವರು ಸ್ವಾಮೀಜಿಗಳು ಆಗಮಿಸುವರು, ಹಾಗೂ ರಾಜಕೀಯ ಗಣ್ಯರು ಆಗಮಿಸಲಿದ್ದಾರೆ, ಸ್ವಾಮಿಯ ದರ್ಶನಕ್ಕೆ ಬಂದ ಭಕ್ತರಿಗೆ ಮಹಾ ಪ್ರಸಾದ ಏರ್ಪಡಿಸಲಾಗಿದೆ, ಸಮಸ್ತ ಭಕ್ತಾದಿಗಳು ಈ ಮಹೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಈ ಮೂಲಕ ತಿಳಿಸಿದೆ.
ಇದೇ ಸಂಧರ್ಭದಲ್ಲಿ ದಯಾನಂದ್ ಪ್ರಹ್ಲಾದ್ ಎನ್ ಮಲ್ಲೇಶ್ ಇತರರು ಹಾಜರಿದ್ದರು.

