ಬಯಲು ಸೀಮೆ ಜಿಲ್ಲೆಯಲ್ಲಿ 48 ಕೋಟಿ ರೂ. ಬೆಳೆಹಾನಿ ಪರಿಹಾರ ಲೂಟಿ

ಸದನಲ್ಲಿ ಸದ್ದು ಮಾಡಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಬುಡಕಟ್ಟು ಜನರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುವ ಈ ಪ್ರದೇಶದಲ್ಲಿ ಶೇಂಗಾ ಇಲ್ಲಿನ ಪ್ರಮುಖ ಬೆಳೆ, ಇದಕ್ಕೆ ಬೆಳೆವಿಮೆ, ಹಾಗೂ ಸರಕಾರದಿಂದ ಪರಿಹಾರ ನೀಡಲಾಗಿದೆ, ಆದರೆ
2022-23 ಸಾಲಿನ
ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ
ವಿತರಣೆಯಲ್ಲಿ ಬರೋಬ್ಬರಿ 47.99 ಕೋಟಿ ರೂ. ಮೊತ್ತದ ಬೃಹತ್ ಹಗರಣ ನಡೆದಿದ್ದು, ಈ ಸಂಬಂಧ 201 ಗ್ರಾಮ
ಆಡಳಿತಾಧಿಕಾರಿಗಳು ಹಾಗೂ 6 ತಹಸೀಲ್ದಾರರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ವಿಧಾನಸಭೆಯಲ್ಲಿ ಸೋಮವಾರ ಚಳ್ಳಕೆರೆ ಶಾಸಕ ಟಿ.
ರಘುಮೂರ್ತಿ ಅವರ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೀಡಿರುವ
ಲಿಖಿತ ಉತ್ತರದಲ್ಲಿ ಭ್ರಷ್ಟಾಚಾರ ವಿರುದ್ಧ
ಕ್ರಮದ ಮಾಹಿತಿ ಹೊರಬಿದ್ದಿದೆ. ಜಿಲ್ಲೆಯ ಆರೂ ತಾಲೂಕುಗಳಲ್ಲಿ ರೈತ ರಲ್ಲ ದವರ ಖಾತೆಗೆ ಹಾಗೂ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳ ಲಾಗಿನ್
ಐಡಿಗಳನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರದ ಮಾನದಂಡಗಳನ್ನು ಗಾಳಿಗೆ ತೂರಿ ಹಣ ಜಮೆ ಮಾಡಲಾಗಿದೆ.

ಈ ಆರ್ಥಿಕ ನಷ್ಟಕ್ಕೆ ನೇರವಾಗಿ ಗ್ರಾಮ
ಆಡಳಿತಾಧಿಕಾರಿಗಳೇ ಹೊಣೆ ಎಂದು ಸರ್ಕಾರ ವರದಿಯಲ್ಲಿ ಉಲ್ಲೇಖಿಸಿದೆ.
ಅಕ್ರಮದ ಮೂಲ ಪತ್ತೆ ಹಚ್ಚಲು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ತನಿಖೆ ಮುಂದುವರಿಸಿದ್ದಾರೆ.
ಅಕ್ರಮ ನಡೆದ ಸಮಯದಲ್ಲಿ ಬಳಸಲಾದ ಕಂಪ್ಯೂಟರ್‌ಗಳ ಐಪಿ ಅಡ್ರೆಸ್ ಹಾಗೂ ಲಾಗಿನ್ ಸಮಯದ ವಿವರಗಳನ್ನು ಕಲೆಹಾಕಲಾಗುತ್ತಿದೆ. ಹಣ
ವರ್ಗಾವಣೆಯಾದ ವ್ಯಕ್ತಿಗಳಿಗೂ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೂ ಇರುವ ನಂಟಿನ ಬಗ್ಗೆಯೂ ತನಿಖೆ
ಚುರುಕುಗೊಂಡಿದೆ.

ಚಳ್ಳಕೆರೆ ತಾಲೂಕಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 83.10 ಲಕ್ಷ ದುರುಪಯೋಗವಾಗಿದ್ದು, ಈ ಸಂಬಂಧ ಇನ್ಸೂರೆನ್ ಕಂಪನಿಯೊಂದರ ವಿರುದ್ಧ ಪರಶುರಾಮಪುರ ಪೊಲೀಸ್‌
ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ
ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಕಾನೂನು ಹೋರಾಟ ನಡೆಸುತ್ತಿದೆ.
ರೈತರಿಗೆ ಸೇರಬೇಕಿದ್ದ ಹಣ ಲೂಟಿ ಮಾಡಿರುವುದು ಗಂಭೀರ ಅಪರಾಧ.

ಈ ಹಗರಣದಲ್ಲಿ ಭಾಗಿಯಾಗಿರುವ
ವಿರುದ್ಧ ಪ್ರತಿಯೊಬ್ಬ ಅಧಿಕಾರಿ
ಕೈಗೊಳ್ಳಲಾಗುವುದು. ಈ ಬಗ್ಗೆ ಕಠಿಣ
ಕ್ರಮ ತನಿಖೆ ಅಂತಿಮ
ಹಂತದಲ್ಲಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ
ತಿಳಿಸಿದ್ದಾರೆ.

About The Author

Namma Challakere Local News
error: Content is protected !!