ಗಜ್ಜುಗಾನಹಳ್ಳಿಯಲ್ಲಿ ಕಾರ್ತಿಕ ಮಾಸದ ಶ್ರೀ ಬಸವೇಶ್ವರ ರಥೋತ್ಸವ.

ನಾಯಕನಹಟ್ಟಿ-: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಗಜ್ಜುಗಾನಹಳ್ಳಿ ಗ್ರಾಮದ ಕೊಟ್ಟಿಗೆ ತಿಮ್ಮಾರೆಡ್ಡಿ ರವರ ಮನೆಯಿಂದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವದ ಗಾಲಿಗೆ ಮಾಡಿಸಿದ ಭಕ್ತರು ಎಡೆ ಅರ್ಪಿಸಿದರು.
2:30 ಕ್ಕೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಿದರು ನಂತರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು.

ಈ ವರ್ಷ ಗಜ್ಜುಗಾನಹಳ್ಳಿ ಗ್ರಾಮದ ಓ. ದಾಸಯ್ಯ ಐದು ಸಾವಿರ ರೂಪಾಯಿಗೆ ಮುಕ್ತಿ ಬಾವುಟ ತಮ್ಮದಾಗಿಸಿಕೊಂಡರು.

ನಂತರ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ನಾಮ ಸ್ಮರಣೆ ಮಾಡುತ್ತ ಗ್ರಾಮಸ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು.

ಭಕ್ತರೂ ರಥವನ್ನು ಪಾದಗಟ್ಟೆ ಅವರಿಗೆ ಹೇಳಿದು ಪುನಃ ಮೂಲ ಸ್ಥಾನಕ್ಕೆ ಎಳೆದ ತಂದು ನಿಲ್ಲಿಸಿದರು.

ರಥೋತ್ಸವಕ್ಕೆ ಡೊಳ್ಳು ವೀರಗಾಸೆ ಕುಣಿತ ಸೋಮನ ಕುಣಿತ ಸಮ್ಮಾಳೆ ನಂದಿ ಧ್ವಜ ಕುಣಿತ ವಿಶೇಷ ಮೆರಗು ನೀಡಿದವು.

ಇದೆ ವೇಳೆ ಗ್ರಾಮದ ದೊಡ್ಡ ಯಾರ ಬಾಲಯ್ಯ,ಡಿ. ಬೋರಯ್ಯ, ಎಸ್ ಎಂ.ತಿಪ್ಪೇಸ್ವಾಮಿ, ಪಿಡಿಒ ಜಯಣ್ಣ,ಓಳೆಗೆ ಓಬಯ್ಯ, ಪೋಸ್ಟ್ ಜಯಣ್ಣ,ವೈ.ಪಿ. ಕನ್ನಯ್ಯ, ಟಿ ಶಂಕರ್ ಮೂರ್ತಿ, ಸೊಸೈಟಿ ನಾಗರಾಜ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ ಎಸ್ ಮಂಜಣ್ಣ, ಸದಸ್ಯರಾದ ಪ್ರೇಮಲತಾ ಶಂಕರ್ ಮೂರ್ತಿ, ಪಾಲಮ್ಮ ಜಿ ಬೋರಯ್ಯ, ಬಸಕ್ಕ ತಿಪ್ಪೇಸ್ವಾಮಿ, ರಾಧಮ್ಮ ಬೋಜರಾಜ್, ಸೇರಿದಂತೆ ಸಮಸ್ತ ಗಜ್ಜುಗಾನಹಳ್ಳಿ ಗ್ರಾಮಸ್ಥರು ವಿವಿಧ ಹಳ್ಳಿಗಳ ಭಕ್ತಾದಿಗಳು ಇದ್ದರು

About The Author

Namma Challakere Local News
error: Content is protected !!