ಚಳ್ಳಕೆರೆ : ಕಳೆದ 12 ವರ್ಷಗಳ ಶಾಸಕರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯನೋಡಿ ಸಹಿಸಲು ಹಾಗದ ಬಿಜಿಪಿ ಮುಖಂಡರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮುಖಂಡರು ಪತ್ರಿಕಾ ಹೇಳಿಕೆ ನೀಡುವ ಭರಾಟೆಯಲ್ಲಿ ಬಾಯಿಗೆ ಬಂದಿದ್ದನ್ನು ಮಾತನಾಡಿದ್ದರೆ, ಕ್ಷೇತ್ರದಲ್ಲಿ ಕಳೆದ 12 ವರ್ಷಗಳಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಕಾರಣ ಶಾಸಕರ ಆಡಳಿತ ವ್ಯವಸ್ಥೆ ಹಾಗಿದೆ, ಆದರೆ ಸುಖಾ ಸುಮ್ಮನೆ ಆಡಳಿತ ಯಂತ್ರ ಕುಸಿದಿದೆ, ಗನ್ ಮ್ಯಾನ್, ಚೇಲಗಳನ್ನು ಇಟ್ಟುಕೊಂಡಿದ್ದಾರೆ ಎನ್ನುವ ಆರೋಪ ಸುಳ್ಳು, ಕೊರೊನ ಸಂಧರ್ಭದಲ್ಲಿ ಇದೇ ಭಾರತೀಯ ಜನತಾ ಪಾರ್ಟಿ ಮುಖಂಡರು ಎಲ್ಲಿ ಹೋಗಿದ್ದರು, ಕೊರನದಲ್ಲಿ ಸಾವು ನೋವು ಲೆಕ್ಕಿಸದೆ ಜನಗಳ ಆಶ್ರಯಕ್ಕೆ ನಿಂತ ಶಾಸಕರು ಹಾಗೂ ಮುಖಂಡರುಗಳು ಶಾಸಕರ ನೇತೃತ್ವದಲ್ಲಿ ಪ್ರಾಣ ಪಣಕ್ಕಿಟ್ಟು ಆಹಾರ ಕಿಟ್, ಹಾಗೂ ರಕ್ಷಣೆ ಮಾಡಿದ್ದಾರೆ, ಇನ್ನು ಬಿಜೆಪಿಗರು ಸುಖ ಸುಮ್ಮನೆ ಆರೋಪ ಮಾಡುವುದು ಬಿಟ್ಟು, ಕ್ಷೇತ್ರ ವ್ಯಾಪ್ತಿ ಸುತ್ತಿ ಶಾಸಕರ ಅಭಿವೃದ್ದಿ ನೋಡಿಕೊಂಡು ಬರಲಿ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಮುಖಂಡ ಪಿ.ತಿಪ್ಪೇಸ್ವಾಮಿ ಮಾತನಾಡಿ, ಬಿಜೆಪಿಗರು ಕೇವಲ ಉಳುಕು ಹುಡುಕುವುದನ್ನು ಬಿಟ್ಟು, ಕ್ಷೇತ್ರವ್ಯಾಪ್ತಿ ಸುತ್ತಿ ಶಾಸಕರ ಅಭಿವೃದ್ದಿ ಬಗ್ಗೆ ಮಾತನಾಡಲಿ, ಕೇವಲ ಕಟ್ಟಡ ಕಾಮಗಾರಿಯಲ್ಲಿ ಕಮಿಷನ್ ಪಡೆದಿದ್ದಾರೆ ಎನ್ನುವುದಾದರೆ ತನಿಖೆ ಮಾಡಿಸಲಿ, ನಾವು ಸಿದ್ದರಿದ್ದೆವೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪ್ರತ್ಯರೋಪ ಮಾಡಿದರು.
ಮುಖಂಡ ಚೌಳೂರು ಪ್ರಕಾಶ್ ಸೈಯದ್, ಕಲ್ಲೇಶಪ್ಪ, ಮಾತನಾಡಿದರು,
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಪಿ.ತಿಪ್ಪೇಸ್ವಾಮಿ,ಗದ್ದಿಗೆ ತಿಪ್ಪೇಸ್ವಾಮಿ, ಸೈಯದ್, ಆರ್.ಪ್ರಸನ್ನ ಕುಮಾರ್, ರಮೇಶ್ ಗೌಡ,ಸಿಟಿ.ಶ್ರೀನಿವಾಸ್, ಕೃಷ್ಣಮೂರ್ತಿ, ಪಾಲಯ್ಯ, ವಿರೂಪಾಕ್ಷ, ಎಲ್ ಐ ಸಿ.ತಿಪ್ಪೇಸ್ವಾಮಿ, ಇತರರು ಹಾಜರಿದ್ದರು.


