ಚಳ್ಳಕೆರೆ : ಮಕ್ಕಳಂತೆ ಮರಗಿಡಗಳನ್ನು ಪ್ರೀತಿಸಿ ಇಡೀ ವಿಶ್ವಕ್ಕೆ ಮಾದರಿಯಾದ ಸಾಲು ಮರದ ತಿಮ್ಮಕ್ಕ ವಿಶ್ವ ಮಾನವರು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.
ಅವರು ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಕೆಆರ್.ಪಕ್ಷ, ಹಾಗೂ ರೈತ ಸಂಘದಿಂದ ಆಯೋಜಿಸಿದ್ದ ತಿಮ್ಮಕ್ಕ ನವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು,
ನೂರಾರು ಮರಗಳನ್ನು ಹೆಮ್ಮರವಾಗಿ ಬೆಳೆಸಿದ ಇವರ ಕಾರ್ಯ ಶಾಘ್ಲನೀಯ, ಸಸಿ
ನೆಟ್ಟು ಪೋಷಣೆ ಮಾಡಿ ಸಾಕಿದ ಕೀರ್ತಿ ಸಾಲುಮರದ
ತಿಮ್ಮಕ್ಕ ಇವರಿಗೆ ಸಲ್ಲುತ್ತದೆ.
ಬದುಕಿನ ಸಾರ್ಥಕತೆ ಪಡೆದುಕೊಳ್ಳಲು ಸಾಲು ಮರದ
ತಿಮ್ಮಕ್ಕ ಅವರ ರೀತಿ ಮರಗಿಡಗಳನ್ನ ಬೆಳಸಿದ ರೀತಿ ಅವರ
ನಿಸ್ವಾರ್ಥ ಸೇವೆಯ ಮನೋಭಾವನೆ ಪ್ರತಿಯೊಬ್ಬರು
ಬೆಳೆಸಿಕೊಳ್ಳಬೇಕು. ಹೆಚ್ಚು ಹೆಚ್ಚು ಗಿಡ ಮರಗಳನ್ನು
ಬೆಳೆಸುವ ಮೂಲಕ ಪರಿಸರವನ್ನು ಉಳಿಸಬೇಕು ಎಂದರು.
ಕೆ.ಆರ್ ಪಕ್ಷದ ನಗರಂಗೆರೆ ಮಹೇಶ ಮಾತನಾಡಿ,
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ
ಮಾರಣ ಹೋಮ ನಡೆಯುತ್ತಿದ್ದು ಹಸಿರು ಕಾಡು ಹೋಗಿ
ಕಾಂಕ್ರೀಟ್ ಕಾಡು ನಿರ್ಮಾಣ ವಾಗಿದ್ದು ಇದರಿಂದಾಗಿ
ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ ವೃಕ್ಷ
ಮಾತೆ ಸಾಲು ಮರದ ತಿಮ್ಮಕ್ಕಪರಿಸರ ಪ್ರೇಮಿಯಾಗಿದ್ದರು ಎಂದರು.

