ಶ್ರಮವಹಿಸಿ ಕೆಲಸ ಮಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಬಹುದಲ್ಲವೇ?
ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಅಭಿಮತ.
ನಾಯಕನಹಟ್ಟಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಶ್ರಮವಹಿಸಿ ಕಾಂಗ್ರೆಸ್ ಸರ್ಕಾರ ಬರಲು ಕೆಲಸ ಮಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯನವರು ಅವಕಾಶ ಕಲ್ಪಿಸಿ ಕೊಡಬೇಕೆಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಮೊನ್ನೆ ಮೈಸೂರಿನಲ್ಲಿ ಸಾಧನಾ ಸಮಾವೇಶವನ್ನು ಮಾಡಿದ್ದಾರೆ. ಅದೇನು ಸಾಧನ ಸಮಾವೇಶನ ಅಥವಾ ಬಿಜೆಪಿ ಪಕ್ಷವನ್ನು ಬೈಯುವಂತ ಸಮಾವೇಶನ! ಸರ್ಕಾರದಲ್ಲಿ ದುಡ್ಡು ಇಲ್ಲ, ಖಜಾನೆ ಖಾಲಿಯಾಗಿದೆ ಸಾಧನ ಸಮಾವೇಶ ಮಾಡಲಿಕ್ಕೆ ಹೊರಟಿದ್ದಾರೆ. ಹಿಂದೆ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಇದ್ದಾಗ ಎನ್ ಆರ್ ಇ ಜಿ ಎನ್ನುವ ಕಾಮಗಾರಿ ಯನ್ನು ಜಾರಿಗೆ ತಂದಿದ್ದರು. ಈ ಯೋಜನೆಯಿಂದ ಇಡೀ ರಾಜ್ಯಕ್ಕೆ ಅನುಕೂಲವಾತು. ಅದನ್ನು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗ ತೆಗೆಯಬಹುದಿತ್ತಲ್ಲವೇ? ದೇಶದ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಯಾರು ತೆಗೆಯಲಿಕ್ಕೆ ಇಷ್ಟಪಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಟ್ಟಿ ಭಾಗ್ಯಗಳ ಮೂಲಕ ಅಧಿಕಾರಕ್ಕೆ ಬಂದಿರುವುದನ್ನು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂಬುದನ್ನು ಮರೆಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದಲ್ಲಿದ್ದಾಗ ಮಾಜಿ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿಯವರಿಗೆ ಯಾವ ರೀತಿ ಬೈದಿದ್ದೀರಾ ಅಂತ ಜ್ಞಾಪಕ ಶಕ್ತಿ ಇದೆಯೇ? ಚಳ್ಳಕೆರೆಗೆ ಬಂದಂತಹ ಸಂದರ್ಭದಲ್ಲಿ ಸೋನಿಯ ಗಾಂಧಿ ವಿದೇಶಿ ಮಹಿಳೆ ಇವರಿಗೆ ಭಾರತೀಯ ಪೌರತ್ವ ಕೊಡಬಾರದು ಎಂದು ಬೊಬ್ಬೆ ಹೊಡೆದಿದ್ದರಲ್ಲ ಮರೆತಿದ್ದೀರಾ? ಜೆಡಿಎಸ್ ಪಕ್ಷದಲ್ಲಿ ನಿಮ್ಮನ್ನು ಬೆಳೆಸಿದ ಮಾಜಿ ಪ್ರಧಾನಿ ದೇವೇಗೌಡರನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್ಸಿಗೆ ಬಂದರಲ್ಲ! ಯಾಕೆ ಕಾಂಗ್ರೆಸ್ಗೆ ಬಂದಿರಿ ನೀವು? ವಿದೇಶಿ ಮಹಿಳೆ ಎಂದು ಹೇಳಿಕೆ ನೀಡಿದವರು ಹೋಗಿ ಅವರ ಕಾಲಿಗೆ ಬಿದ್ದಿದ್ದೀರಾ ನಾಚಿಕೆಯಾಗುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯ ಮಹಾ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿ ನನ್ನನ್ನು ಮುಗಿಸುವ ಷಡ್ಯಂತ್ರ ನಡೆಸಿದ್ದರು. ಬದಾಮಿ ಹಾಗೂ ಮೊಳಕಾಲ್ಮೂರು ಎರಡು ಕಡೆ ಟಿಕೆಟ್ ಪಡೆದು ಬದಾಮಿಯಲ್ಲಿ ಸಿದ್ದರಾಮಯ್ಯನವರಿಗೆ ಅನುಕೂಲ ಮಾಡಿಕೊಟ್ಟು, ಮೊಳಕಾಲ್ಮುರಿನಲ್ಲಿ ಮಹಾ ನಾಯಕರು ಕ್ಯಾಂಪ್ ಹಾಕಿದ್ದರು. ಬದಾಮಿಯಲ್ಲಿ 1000 ನೋಟ್ ಅಂತರದಲ್ಲಿ ಸಿದ್ದರಾಮಯ್ಯನವರು ಗೆಲುವು ಸಾಧಿಸಿದರು. ಬದಾಮಿಯಲ್ಲಿ ಸಿದ್ದರಾಮಯ್ಯರ ಗೆಲುವಿಗೆ ಸಹಕರಿಸಿದವರು ಯಾರು? ಬಳ್ಳಾರಿಯವರ! ಅಥವಾ ಬೇರೆಯವರಾ? ನೀವೇ ಮಾಡಿದ್ದು. ಸಿದ್ದರಾಮಯ್ಯ ಗೆಲುವು ಸಾಧಿಸಿ ವಿರೋಧ ಪಕ್ಷದ ನಾಯಕರು ಆಗಲು ಸಹಕರಿಸಿದಿರಿ. ವಿರೋಧ ಪಕ್ಷದ ನಾಯಕರಾಗಿ ಪಕ್ಷವನ್ನು ಸಂಘಟನೆ ಮಾಡಿಕೊಂಡ ಮೇಲೆ ಬಂದರು. ಈ ದಿನ ರಾಜ್ಯದ ಮುಖ್ಯಮಂತ್ರಿಯಾದರು ಇಲ್ಲವಾದಲ್ಲಿ ಮೂಲೆಗುಂಪು ಆಗುತ್ತಿದ್ದರು. ಅವರ ಸ್ವಕ್ಷೇತ್ರನೇ ಕೈಕೊಟ್ಟಿತ್ತು ಇದಕ್ಕೆಲ್ಲ ಕಾರ್ಣಿಕರ್ತರು ಯಾರು ? ನೀವೇ ಅಲ್ಲವೇ!.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾದಾಗ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತ ಪರ ಅಂತ ಹೇಳುತ್ತಿದ್ದಾರೆ. ನೀವೇಕೆ ರೈತರ ಸಾಲ ಮನ್ನಾ ಮಾಡಬಾರದು! ಸುಮ್ನೆ ಬೊಗಳೆ ಬಿಟ್ಟುಕೊಂಡು ಓಡಾಡುತ್ತಿದ್ದೀರಾ. ಈ ಹಿಂದೆ ಮುಖ್ಯಮಂತ್ರಿಯಾದಾಗ ಉತ್ತಮ ಆಡಳಿತ ನಡೆಸಿದ್ದೀರಾ ಅದನ್ನು ನಾನು ಒಪ್ಪುತ್ತೇನೆ. ಆದರೆ ಈ ಬಾರಿ ಆ ರೀತಿಯ ಆಡಳಿತ ನಡೆಸುತ್ತಿಲ್ಲ ತುಂಬಾ ಬದಲಾವಣೆ ಮಾಡಿಕೊಳ್ಳಬೇಕು. ನಿಮ್ಮ ಆಡಳಿತ ಸರಿ ಇದೆಯೇ? ಬಿಜೆಪಿ ಅಧಿಕಾರದಲ್ಲಿದ್ದಾಗ ನೀವೇ 40% ಕಮಿಷನ್ ಆರೋಪ ಮಾಡಿದ್ದೀರಿ. ಈಗ ನೀವೇ 60 %ಗೆ ಹೋಗಿದ್ದೀರಲ್ಲ. ಎಲ್ಲಿ ನೋಡಿದರೂ ಬರೀ ಲೂಟಿನೇ! ರಾಜ್ಯದಲ್ಲಿರುವ ಯಾವ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಆಗುತ್ತಿಲ್ಲ. ನೀವು ಅದರ ಬಗ್ಗೆ ಗಮನ ಹರಿಸುತ್ತಿಲ್ಲ ನಿಮ್ಮ ನಿಮ್ಮ ಕಿತ್ತಾಟದಲ್ಲಿ ಕಾಲಹರಣ ಮಾಡುತ್ತಿದ್ದೀರಲ್ಲ. ಕರುಣ ಬಂದಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉಚಿತ ಲಸಿಕೆಗಳನ್ನು ಹಾಕಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿ ಮನೆ ಮನೆಗೆ ನೀರು ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ನೀವೇನು ಮಾಡಿದ್ದೀರಾ ಸಿದ್ದರಾಮಣ್ಣ? ನೀವು ಟಿಪ್ಪುನ ಎದೆಯಲ್ಲಿ ಇಟ್ಟುಕೊಂಡಿದ್ದೀರಾ, ಇಲ್ಲಿ ಒಬ್ಬರು ಖಾದರ್, ಕರೀಂನ ಇಟ್ಟುಕೊಂಡಿದ್ದಾರೆ. ನೀವು ಯಾರು ಬೇಕಾದರೂ ಇಟ್ಟುಕೊಳ್ಳಿ ಬೇಡ ಎನ್ನುವರು ಇಲ್ಲ ಆದರೆ ಬೇರೆಯವರ ಬಗ್ಗೆ ಗಮನಹರಿಸಬೇಕಲ್ಲವೇ! ಬರೀ ಬಿಟ್ಟಿ ಭಾಗ್ಯಗಳಿಗೆ ಸೀಮಿತವಾಗದೆ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನಹರಿಸಿ ಎಂದು ಸಲಹೆ ನೀಡಿದರು.

