ಚಳ್ಳಕೆರೆ :
ಚಿತ್ರದುರ್ಗ: ಸೂರಿಗಾಗಿ ನಿರಾಶ್ರಿತರ ಪ್ರತಿಭಟನೆ
ಚಿತ್ರದುರ್ಗ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು
ನೀಡದೆ, ಸರ್ಕಾರ ವಂಚನೆ ಮಾಡುತ್ತಿದೆ ಎಂದು ನಿವೇಶ ಮತ್ತು
ವಸತಿ ರೈತ ಹೋರಾಟ ಸಮಿತಿ ಚಿತ್ರದುರ್ಗದಲ್ಲಿಂದು ಪ್ರತಿಭಟನೆ
ನಡೆಸಿತು. ನಗರದ ಗಾಂಧಿ ವೃತದಿಂದ ಪ್ರತಿಭಟನಾಕಾರರು
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು
ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಧಿಕಾರಿಗಳ ಮೂಲಕ
ಮುಖ್ಯಮಂತ್ರಿಗಳಿಗೆ ಮನವಿಯನ್ನ ಸಲ್ಲಿಸಿದ್ದಾರೆ.

