ರಾತ್ರಿ ವೇಳೆ ವಿದ್ಯುತ್ ನೀಡುವಂತೆ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ.
ಪರಶುರಾಂಪುರ.
ಗ್ರಾಮದ ಬೇಸ್ಕಂ ಕಚೇರಿ ಮುಂಭಾಗ ಮಂಗಳವಾರ ಚೌಳೂರು ಗ್ರಾಪಂ ವ್ಯಾಪ್ತಿಯ ಗೊಲ೯ಕಟ್ಟೆ ಕಪಿಲೆ ಮತ್ತು ಮಲ್ಲಜ್ಜಿ ಕಪಿಲೆಯ ನಿವಾಸಿಗಳಿಗೆ ರಾತ್ರಿ ವೇಳೆ ವಿದ್ಯುತ್ ಜತೆಗೆ ನಿರಂತರ ಜ್ಯೋತಿ ಅಳವಡಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸಂದರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಮಾತನಾಡಿ, ಚೌಳೂರು ಗ್ರಾಪಂ ವ್ಯಾಪ್ತಿಯ ಗೊಲ೯ಕಟ್ಟೆ ಕಪಿಲೆ ಮತ್ತು ಮಲ್ಲಜ್ಜಿ ಕಪಿಲೆಯಲ್ಲಿ ನಲವತ್ತರಿಂದ ಐವತ್ತು ಮನೆಗಳ ನಿವಾಸಿಗಳಿಗೆ ಮೋಟಾರ್ ಲೈನ್ ವಿದ್ಯುತ್ ಹೊರತು ಪಡಿಸಿ ರಾತ್ರಿ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಎರಡ್ಮೂರು ಬಾರಿ ನಿವಾಸಿಗಳ ಜತೆ ಮನವಿ ನೀಡಲಾಗಿದೆ ಈ ಬಾರಿ ಸ್ಪಂದಿಸಿದ್ದಲ್ಲಿ ಗ್ರಾಮಸ್ಥರ ಜತೆ ಸಂಘವು ಸೇರಿ ಉಪವಾಸ ಪ್ರತಿಭಟನೆ ಮಾಡಲಾಗುವುದು ಎಂದರು.
ಪ್ರತಿಭಟನಕಾರರು ಏಕಾಏಕಿ ವಿದ್ಯುತ್ ತೆಗೆದು ಕೊಡುತ್ತಾರೆ ಇದರಿಂದ ನಾಲ್ಕು ಟಿವಿ,ಫ್ಯಾನ್,ಮಿಕ್ಸಿ ಇನ್ನಿತರೆ ಸುಟ್ಟು ಹೋಗುವುರದ ನಡುವೆ ರಾತ್ರಿ ವೇಳೆಯಲ್ಲಿ ಹಾವು,ಚೇಳು,ಸೊಳ್ಳೆ ಸೇರಿದಂತೆ ಇನ್ನಿತರೆ ವಿಷ ಜಂತು ಹುಳುಗಳ ಕಾಟದ ಭಯದ ವಾತಾವರಣ ಒಂದು ಕಡೆಯಾದರೆ ಒಂದರಿಂದ ಐದನೆ ತರಗತಿಯ ಶಾಲೆ ಹಾಗೂ ಓದುವ ಮಕ್ಕಳಿದ್ದಾರೆ. ಸಂಜೆ ಸಮಯದಲ್ಲಿ ನಮ್ಮ ಹುಡುಗರು ಓದಿ,ಬರೆದು ಕೊಂಡಿದ್ದನ್ನಾ ಇಲ್ಲಿವರೆಗೂ ನೋಡಿಲ್ಲ ಅಳಲು ಹಂಚಿಕೊಂಡರು.
ಸಂದರ್ಭದಲ್ಲಿ ಎಇಇ ಶಿವಪ್ರಸಾದ್ ದೂರವಾಣಿ ಮೂಲಕ ಮಾತನಾಡಿ, ಇಂದಿನಿಂದ ರಾತ್ರಿ ಸಮಯದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಸಮಸ್ಯೆ ಆದರೆ ಬೆಸ್ಕಾಂ ಕಚೇರಿ ಎದುರು ಅಮರಣಾಂತ ಉಪವಾಸ ಪ್ರತಿಭಟನೆ ರೈತ ಸಂಘದೊಂದಿಗೆ ನಡೆಸಲಾಗುವುದು ಎಂದು ತಿಳಿಸುತ್ತಾ ಪ್ರತಿಭಟನೆ ಹಿಂಪಡೆದರು.
ರೈತ ಸಂಘ ಮತ್ತು ಪ್ರತಿಭಟನಕಾರರು ಗ್ರಾಮದ ಬೆಸ್ಕಾಂ ಅಧಿಕಾರಿ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ಜಂಪಣ್ಣ, ಹನುಮಂತರಾಯ,ಖಾದರ್ ಭಾಷ, ಚೌಳೂರು ಪ್ರಕಾಶ್,ಶಿವಣ್ಣ,ಕೊಂಡ್ಲಿ ಪರಮೇಶ್ವರಪ್ಪ,ತಿಮ್ಮಜ್ಜ, ತಿಪ್ಪೇಸ್ವಾಮಿ,ಶಿವಣ್ಣ,ಚಲುಮಪ್ಪ, ವೀರಭದ್ರಪ್ಪ, ಮಹಾಂತೇಶ, ಕೇಶವಮೂರ್ತಿ, ಲಕ್ಷ್ಮೀದೇವಿ,ತಿಪ್ಪೀರಮ್ಮ,ಕೋಡಳಮ್ಮ,ಗಂಗಮ್ಮ, ನಾಗವೇಣಿ, ಅನ್ನಪೂರ್ಣಮ್ಮ, ಮಹಾದೇವಮ್ಮ,ಹೇಮಲತಾ,ಮಂಜುಳ,ರತ್ನಮ್ಮ,ಪಾವ೯ತಮ್ಮ,ಈರಣ್ಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

