ಚಳ್ಳಕೆರೆ : ಹಗಲು ವೇಳೆಯಲ್ಲಿ ಗುಜರಿ ವ್ಯಾಪಾರಿಯ ವೇಷದಲ್ಲಿ ಒಂಟಿ‌ಮನೆ, ಬೀಗ ಹಾಕಿದ ಮನೆ ಹಾಗೂ ಸೆಕ್ಯುರಿಟಿ ಇಲ್ಲದ ಮನೆಗಳನ್ನು ನೋಡಿಕೊಂಡು, ರಾತ್ರಿ ವೇಳೆ ಕಳ್ಳತನ ಮಾಡುವ ಗ್ಯಾಂಗ್ ಚಳ್ಳಕೆರೆ ನಗರದಲ್ಲಿ ಕಂಡು ಬಂದಿದೆ.

ಚಳ್ಳಕೆರೆ ನಗರದ ಮದಕರಿ ನಗರದಲ್ಲಿ ಹಗಲು‌ ವೇಳೆಯಲ್ಲಿ ‌ಪಾತ್ರೆ ವ್ಯಾಪಾರಿಗಳ ಸೋಗಿನಲ್ಲಿ ಬಂದು ಎಲ್ಲಾ ಮನೆಗಳನ್ನು ವಿಕ್ಷಣೆ ಮಾಡುವುದು, ಮನೆಯ ಮುಂದೆ ಇರುವ ಹಳೆಯ ಪಾತ್ರೆಗಳನ್ನು ಕದ್ದುಯೊವುದು ಮಾಡಿರುವುದು ಬೆಳಕಿಗೆ ಬಂದಿದೆ.

ಆದ್ದರಿಂದ ಸಾರ್ವಜನಿಕರು ಇಂತಹ ‌ಅನುಮಾನಸ್ಪದ ವ್ಯಕ್ತಿಗಳು ತಮ್ಮ ವಾರ್ಡ್ ನಲ್ಲಿ ತಿರುಗಾಟ‌ನಡೆಸುತ್ತಿದ್ದಾರೆ ಕೂಡಲೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ,

ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಗುಜರಿ ವ್ಯಾಪಾರಿಗಳು, ಪಾತ್ರೆ ಮಾರುವ ಬಟ್ಟೆ ಮಾರಾಟ ಮಾಡುವ ಕೆಲ ವ್ಯಕ್ತಿಗಳ ಸೋಗಿನಲ್ಲಿ ಸಿಸಿ ಕ್ಯಾಮರಾಗಳು ಇಲ್ಲದೆ ಇರುವ ಮನೆಗಳು, ಹಾಗೂ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಾರೆ,

ಕಳ್ಳತನ ನಡೆಯುವ ಮುನ್ನವೇ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ್ದಲ್ಲಿ ಚಳ್ಳಕೆರೆ ನಗರದಲ್ಲಿ ಕಳ್ಳತನ ಮಾಡುವವರನ್ನು ಮಟ್ಟ ಹಾಕಿ‌ ಕಡಿವಾಣ ಹಾಕಬಹುದು ಎನ್ನಲಾಗಿದೆ.

About The Author

Namma Challakere Local News
error: Content is protected !!