ಚಳ್ಳಕೆರೆ :ಹಿರಿಯೂರು: ಸಜೀವ ದಹನದ ರಹಸ್ಯ ಬಿಚ್ಚಿಟ್ಟ
ಪೊಲೀಸರು
ಹಿರಿಯೂರಿನ ಅರಳಿಕಟ್ಟೆ ಬಳಿ ಬುಧವಾರ ಸಂಜೆ ಕಾರೊಂದು
ಹೊತ್ತಿ ಉರಿದು, ಅದರಲ್ಲಿದ್ದ ವ್ಯಕ್ತಿ ಸಿದ್ದೇಶ್ವರ ಸಜೀವ ದಹನಗೊಂಡ
ಘಟನೆ ನಡೆದಿದೆ. ಸಿದ್ದೇಶ್ವರ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಚಾಲನೆ
ಮಾಡುತ್ತಾ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ
ಕಂಡು ಗ್ರಾಮಸ್ಥರು ಕಾರು ನಿಲ್ಲಿಸಲು ಯತ್ನಿಸಿದರೂ, ಆತ ನಿಲ್ಲಿಸದೆ
ಮುಂದೆ ಸಾಗಿದ್ದಾನೆ. ಅರಳಿಕಟ್ಟೆಗೆ ತಲುಪುವ ಸ್ವಲ್ಪ ದೂರದಲ್ಲಿ
ಬೆಂಕಿ ತೀವ್ರಗೊಂಡು, ಸಿದ್ದೇಶ್ವರ ದುರ್ಮರಣಕ್ಕೀಡಾಗಿದ್ದಾನೆ.

